ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53 ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ

Last Updated 16 ಜುಲೈ 2019, 19:18 IST
ಅಕ್ಷರ ಗಾತ್ರ

ಬೆಂಗಳೂರು: 53 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಡೆಲಿವರಿ ಬಾಯ್‌ ಆನಂದ್ ಎಂಬುವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರಿಂದ ₹ 5,300 ದಂಡ ವಸೂಲಿ ಮಾಡಲಾಗಿದೆ.

ಮೊಬೈಲ್ ಆ್ಯಪ್ ಆಧರಿತ ಆಹಾರ ಸರಬರಾಜು ಮಾಡುವ ‘ಸ್ವಿಗ್ಗಿ’ ಕಂಪನಿಯ ಡೆಲಿವರಿ ಬಾಯ್ ಆಗಿರುವ ಆನಂದ್, ಜುಲೈ 13ರಂದು ಆಡುಗೋಡಿ ಸಿಗ್ನಲ್‌ ಜಂಪ್‌ ಮಾಡಿದ್ದರು. ಅದನ್ನು ಗಮನಿಸಿದ್ದ ಪೊಲೀಸರು, ಅವರನ್ನು ಬೆನ್ನಟ್ಟಿ ಬೈಕ್ ನಿಲ್ಲಿಸಿದ್ದರು. ಆನಂದ್ ಹೆಲ್ಮೆಟ್ ಸಹ ಧರಿಸಿರಲಿಲ್ಲ.

ಆನಂದ್ ಅವರ ಬೈಕ್‌ ನೋಂದಣಿ ಸಂಖ್ಯೆಯನ್ನು ಉಪಕರಣದಲ್ಲಿ ನಮೂದಿಸಿದ್ದರು. 53 ಬಾರಿ ನಿಯಮ ಉಲ್ಲಂಘನೆ ಮಾಡಿದ್ದು ಗಮನಕ್ಕೆ ಬಂದಿತ್ತು. ಬೈಕ್ ಸುಪರ್ದಿಗೆ ಪಡೆದ ಪೊಲೀಸರು, ದಂಡ ಪಾವತಿ ಮಾಡುವಂತೆ ರಶೀದಿ ನೀಡಿದ್ದರು. ದಂಡ ಪಾವತಿ ಮಾಡಿದ ಬಳಿಕವೇ ಬೈಕ್ ಬಿಟ್ಟು ಕಳುಹಿಸಿದ್ದಾರೆ.

‘ಆನಂದ್ ಅವರು ಒಂದೆರಡು ಬಾರಿ ಮಾತ್ರ ನಿಯಮ ಉಲ್ಲಂಘನೆ ಮಾಡಿರಬಹುದೆಂದು ಸುಮ್ಮನಾಗಿದ್ದೆವು. ಉಪಕರಣದಲ್ಲಿ ರಿಶೀದಿ ಮುದ್ರಿಸುವಾಗ ಕಾಗದದ ಒಂದು ಸುರುಳಿಯೇ ಖಾಲಿ ಆಯಿತು. ಮತ್ತೊಂದು ಸುರುಳಿ ಬಳಸಿ ರಶೀದಿ ಮುದ್ರಿಸಿ ನೀಡಲಾಯಿತು’ ಎಂದು ಪೊಲೀಸರು ಹೇಳಿದರು.

ಆಟೊ ಚಾಲಕನಿಗೆ 4,200 ದಂಡ: ಆಟೊ ಚಾಲಕ ಸಂತೋಷ್ ಎಂಬುವರು 42 ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಅವರಿಗೆ 4,200 ದಂಡ ವಿಧಿಸಲಾಗಿದೆ.

‘ಮಂಗಳವಾರ ತಪಾಸಣೆ ವೇಳೆ ಸಂತೋಷ್ ಸಿಕ್ಕಿಬಿದ್ದಿದ್ದರು. ಅವರಿಂದ ದಂಡ ವಸೂಲಿ ಮಾಡಿದ್ದೇವೆ’ ಎಂದು ಆಡುಗೋಡಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT