ಸೋಮವಾರ, ಫೆಬ್ರವರಿ 17, 2020
31 °C

ಬೆಳಗಾವಿಯಲ್ಲಿ ನಗ್ನರಾಗಿ ಸ್ಕೂಟರ್‌ ಓಡಿಸಿದ್ದು ಯುವತಿ ಅಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಡುರಾತ್ರಿಯಲ್ಲಿ ನಗ್ನವಾಗಿ ಸ್ಕೂಟರ್‌ ಓಡಿಸಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ‘ಸ್ಕೂಟರ್‌ ಓಡಿಸಿದ್ದು ಯುವತಿಯಲ್ಲ, ತೃತೀಯ ಲಿಂಗಿ’ ಎಂದು ಹೇಳಿದ್ದಾರೆ. 

ಇದೇ ತಿಂಗಳ 13ರಂದು ರಾತ್ರಿ 10.30ಕ್ಕೆ ನಗರದ ರಸ್ತೆಯೊಂದರಲ್ಲಿ ನಗ್ನ ವ್ಯಕ್ತಿಯೊಬ್ಬರು ಸ್ಕೂಟರ್‌ ಓಡಿಸಿಕೊಂಡು ಹೋಗಿದ್ದರು. ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದರ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ: ನಡುರಾತ್ರಿ ನಗ್ನ ಯುವತಿಯ ನಗರಪ್ರದಕ್ಷಿಣೆ: ವಿಡಿಯೊ ವೈರಲ್‌

ಕ್ಯಾಂಪ್‌ ಪೊಲೀಸರು ಸ್ವಯಂ ಪ್ರೇರೀತರಾಗಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡರು. ಸ್ಕೂಟರ್‌ ಸಂಚರಿಸಿದ್ದ ರಸ್ತೆಯ ವಾಣಿಜ್ಯ ಮಳಿಗೆಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ತೃತೀಯ ಲಿಂಗಿಯನ್ನು ಪತ್ತೆ ಹಚ್ಚಿದ್ದಾರೆ.

‘ಸ್ಕೂಟರ್‌ ಓಡಿಸಿದ್ದು ಯುವತಿಯಲ್ಲ, ಅವರೊಬ್ಬ ತೃತೀಯ ಲಿಂಗಿಯಾಗಿದ್ದಾರೆ. ಅವರು ಬೆಳಗಾವಿಯಲ್ಲಿಯೇ ವಾಸವಾಗಿದ್ದಾರೆ. ಲಿಂಗ ಬದಲಾಯಿಸಿಕೊಂಡಿರುವುದು ಅವರ ಮನೆಯವರಿಗೆ ಗೊತ್ತಿಲ್ಲ. ಅವರೀಗ ಪರಾರಿಯಾಗಿದ್ದು, ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು