ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ತಾಣದಲ್ಲಿ ಕನ್ನಡದ ಚರ್ಚೆ: ಧರ್ಮ, ರಾಜಕೀಯ, ಸ್ವಾಭಿಮಾನದ ಆಯಾಮ

Last Updated 19 ಆಗಸ್ಟ್ 2019, 6:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಕಟ್ಟಡವೊಂದರ ಮೇಲಿದ್ದ ಹಿಂದಿ ನಾಮಫಲಕವನ್ನು ಕನ್ನಡ ಸಂಘಟನೆಗಳು ಕಿತ್ತ ವಿಚಾರ ಈಗ ಸಾಮಾಜಿಕ ತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪರ–ವಿರೋಧ ವಾದಗಳ ಮೂಸೆಯಲ್ಲಿ ಕುದಿಯುತ್ತಿರುವ ಈ ಬೆಳವಣಿಗೆಗೆ ತಾಯ್ನಾಡು, ಧರ್ಮದ, ಆತ್ಮಾಭಿಮಾನ, ರಾಜಕೀಯ, ಕಾನೂನಿನ ಆಯಾಮಗಳು ಸಿಕ್ಕಿವೆ.

ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ ಧರ್ಮೀಯರ ‘ಗಣೇಶ್‌ ಬಾಗ್’ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿದ್ದ ಹಿಂದಿ ಕಟೌಟ್‌ ಅನ್ನು ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಕಾರ್ಯಕರ್ತರು ಕಿತ್ತುಹಾಕಿದ್ದರು. ಘಟನೆಯ ಸಂಬಂಧ ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಆರು ಕಾರ್ಯಕರ್ತರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಬಂಧಿಸಿದರು. ಕಾರ್ಯಕರ್ತರ ಬಂಧನವಾಗುತ್ತಲೇ ಸಂಘಟನೆಯು ಪೊಲೀಸರು, ಗಣೇಶ್‌ ಬಾಗ್‌ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಿತು. ಇಷ್ಟಾಗುತ್ತಲೇ ಸಾಮಾಜಿಕ ತಾಣಗಳಲ್ಲಿ ಕನ್ನಡದ ಚರ್ಚೆ ಆರಂಭವಾಗಿವೆ.

ಸೋಮವಾರ ಟ್ವಿಟರ್‌ನಲ್ಲಿ #Kannada ಎಂಬುದು ಟಾಪ್‌ ಟ್ರೆಂಡಿಂಗ್‌ನಲ್ಲಿತ್ತು. ಸಾವಿರಾರು ಮಂದಿ ಇದೇ ವಿಚಾರದ ಕುರಿತು ಚರ್ಚೆ ನಡೆಸುತ್ತಿದ್ದರು.

#Kannadaದಲ್ಲಿ ಚರ್ಚೆಯಾಗುತ್ತಿದ್ದ ವಿಚಾರಗಳಿವು

ಟ್ವಿಟರ್‌ನಲ್ಲಿ ಕೆಲ ಮಂದಿ ಇದಕ್ಕೆ ಧರ್ಮದ ಆಯಾಮ ನೀಡಿದ್ದಾರೆ. ಇದು ಜೈನ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಎಂದು ಬಿಂಬಿಸಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಂ ಧರ್ಮದವರು ಉರ್ದುವಿನಲ್ಲಿ ಹಾಕುವ ಬ್ಯಾನರ್‌, ಕಟೌಟ್‌ಗಳ ವಿರುದ್ಧ ಹೋರಾಟ ಯಾಕಿಲ್ಲ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರೂ ಇದೇ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅವರ ಟ್ವೀಟ್‌ ಟೀಕೆಗೂ ಗುರಿಯಾಗಿದೆ. ಕನ್ನಡದ ವಿಚಾರವನ್ನು ಇಂಗ್ಲೀಷ್‌ನಲ್ಲಿ ಟ್ವೀಟ್‌ ಮಾಡಿದ್ದಕ್ಕೆ ತೇಜಸ್ವಿ ಸೂರ್ಯ ಅವರನ್ನು ನೆಟ್ಟಿಗರುತರಾಟೆಗೆ ತೆಗೆದುಕೊಂಡಿದ್ದಾರೆ.

ನಾಮ ಫಲಕ ಹಿಂದಿಯಲ್ಲಿದ್ದರೇನು? ಹಿಂದಿ ರಾಷ್ಟ್ರೀಯ ಭಾಷೆ, ಉರ್ದುವಿನ ವಿರುದ್ಧ ಹೋರಾಟ ಮಾಡಿ ಎಂದು ಪ್ರಶ್ನೆ ಎತ್ತಿದವರಿಗೆ ಕೆಲ ಮಂದಿ ಕಾನೂನಿನ ಪಾಠ ಹೇಳಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ನಾಮಫಲಕಗಳು ಕನ್ನಡದಲ್ಲಿಯೂ ಇರಬೇಕು ಎಂಬುದು ಸ್ಥಳೀಯ ಕಾನೂನು. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ. ಮತ್ತು, ಇದು ಧರ್ಮದ ವಿಚಾರವಾಗಿ ನಡೆದ ಘಟನೆಯಲ್ಲ. ಕೇವಲ ನಾಮ ಫಲಕದ ವಿಚಾರ. ಇದರಲ್ಲಿ ಧರ್ಮ ರಾಜಕೀಯವನ್ನು ಎಳೆದು ತರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಕ್ಕೆ ಜೈನರ ಕೊಡುಗೆ ಅಪಾರ

ಕನ್ನಡ, ಕರ್ನಾಟಕ್ಕೆ ಜೈನರ ಪಾತ್ರ ಹಿರಿದು. ಇದೇ ವಿಚಾರವನ್ನು ಕರ್ನಾಟಕ ಮೂಲದ ಜೈನ ಸಮುದಾಯದ ಯುವಕರು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಅದೇ ಹೊತ್ತಿನಲ್ಲೇ ಉತ್ತರ ಭಾರತ ಮೂಲದ ಜೈನರು, ಮಾರ್ವಾಡಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದ್ದಾರೆ. ‘ಕನ್ನಡ, ಕರ್ನಾಟಕಕ್ಕೆ ಜೈನರು ನೀಡಿದ ಕೊಡುಗೆ ಅಪಾರ. ಆದರೆ, ಉತ್ತರ ಭಾರತದ ಮಾರ್ವಾಡಿಗಳು ಇಲ್ಲಿ ವ್ಯಾಪಾರ ಉದ್ದೇಶಕ್ಕಾಗಿಯಷ್ಟೇ ಇದ್ದಾರೆ. ಅವರಿಗೆ ಭಾಷಾಭಿಮಾನವಿಲ್ಲ,’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಮಾತನಾಡುವುದುನ್ನು ಕಲಿಯಲೇಬೇಕು ಎಂದು ಬಹುತೇಕ ಮಂದಿ ಒತ್ತಾಯಿಸಿದ್ದಾರೆ.

ಕನ್ನಡ ಸ್ವತಂತ್ರ ಭಾಷೆ; ಹಿಂದಿ ಮೇಲೆ ಅರಬ್‌ ಪ್ರಭಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT