ಶನಿವಾರ, ಏಪ್ರಿಲ್ 4, 2020
19 °C

ಮಾಗಡಿಯಲ್ಲಿ ಸ್ಪರ್ಧಿಸುವುದು ಸುಳ್ಳು, ಚನ್ನಪಟ್ಟಣದಿಂದಲೇ ಸ್ಪರ್ಧಿಸುವೆ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ‘ಮುಂದಿನ ಚುನಾವಣೆಯಲ್ಲೂ ಚನ್ನಪಟ್ಟಣ ದಿಂದಲೇ ಸ್ಪರ್ಧಿಸಿ ಇಲ್ಲಿಂದಲೇ ಗೆದ್ದು, ಈ ಜಿಲ್ಲೆಯಿಂದ ಮತ್ತೆ ಸಿಎಂ ಆಗುವ ನಂಬಿಕೆ ಇದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ಸುದ್ದಿಯ ಹಬ್ಬಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚನ್ನಪಟ್ಟಣ ಕ್ಷೇತ್ರವನ್ನು ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಚನ್ನಪಟ್ಟಣದ ಜನತೆ ಪ್ರೀತಿಯಿಂದ ನನ್ನನ್ನು ಶಾಸಕನಾಗಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಬದಲಾವಣೆ ಮಾಡುವ ಯೋಚನೆ ಮಾಡುವುದಿಲ್ಲ’ ಎಂದರು.

‘ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ರಾಮನಗರ ಚನ್ನಪಟ್ಟಣ ಎರಡು ನನಗೆ ಒಂದೇ. ಚನ್ನಪಟ್ಟಣ ಬಿಟ್ಟು ಮಾಗಡಿಗೆ ಹೋಗುತ್ತೇನೆ ಎಂದು ಕೆಲವರು ಕತೆ ಕಟ್ಟಿ ಹಬ್ಬಿಸುತ್ತಿದ್ದಾರೆ. ಇದು ಕಟ್ಟುಕತೆ. ಮಾಗಡಿಯ ಶಾಸಕರು ಸಮರ್ಥರಿದ್ದಾರೆ. ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಸಮರ್ಥ ಕಾರ್ಯಕರ್ತರ ಪಡೆಯಿದೆ’ ಎಂದರು.

ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಕುಮಾರಸ್ವಾಮಿ ಯವರು ಅಧಿಕಾರದಲ್ಲಿದ್ದಾಗ ಬಹಳ ಒಳ್ಳೆಯ ಕೆಲಸ
ಮಾಡಿದ್ದಾರೆ. ಆದರೆ ಅವರು ಮಾಡಿದ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರ ವಾಗಲಿಲ್ಲ. ಆದರೆ ಮತ್ತೊಮ್ಮೆ ಕುಮಾರಸ್ವಾಮಿಯವರು ಸಿಎಂ ಆಗೋ ದಿನ ಬರುತ್ತದೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿಯವರು ಮಾತ್ರ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು