ಭಾನುವಾರ, ಜೂಲೈ 5, 2020
22 °C

ಅಸ್ಸಾಂಗೆ ನೀರು ಪೂರೈಕೆ ನಿಂತಿಲ್ಲ: ಭೂತಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೃಷಿ ಚಟುವಟಿಕೆಗಳಿಗಾಗಿ ನೀರು ಹರಿಸುತ್ತಿರುವುದು–ಪ್ರಾತಿನಿಧಿಕ ಚಿತ್ರ

ಥಿಂಪು: ಅಸ್ಸಾಂನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪೂರೈಸುತ್ತಿರುವ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ ಎಂಬ ಆರೋಪವನ್ನು ಭೂತಾನ್‌ ತಳ್ಳಿ ಹಾಕಿದೆ. 

‘ಅಸ್ಸಾಂನ ಬಕ್ಸಾ ಮತ್ತು ಉದಲ್ಗಿರಿ ಜಿಲ್ಲೆಗಳ ರೈತರಿಗೆ ನೀರು ಪೂರೈಸುವುದನ್ನು ಭೂತಾನ್ ತಡೆಹಿಡಿದಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ಆರೋಪಗಳು ಆಧಾರ ರಹಿತವಾಗಿವೆ. ಇದು ಭಾರತ ಮತ್ತು ಭೂತಾನ್‌ ನಡುವೆ ಗೊಂದಲ ಸೃಷ್ಟಿಸುವ ಯತ್ನವಾಗಿದೆ. ಯಾವುದೇ ಕಾರಣವಿಲ್ಲದೇ  ಭೂತಾನ್ ಯಾಕೆ‌ ನೀರಿನ ಸರಬರಾಜನ್ನು ನಿಲ್ಲಿಸುತ್ತದೆ’ ಎಂದು ಭೂತಾನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಶ್ನಿಸಿದೆ.

‘ನೀರು ಸರಬರಾಜು ಮಾಡುತ್ತಿರುವ ಮಾರ್ಗದಲ್ಲಿ ನೈಸರ್ಗಿಕ ಮಲೀನಗಳು ಸೇರಿರುವುದರಿಂದ ನೀರು ಸರಬರಾಜಿನಲ್ಲಿ ತೊಡಕು ಉಂಟಾಗಿದೆ. ಮಾಧ್ಯಮಗಳು ಇದನ್ನು ತಪ್ಪಾಗಿ ವರದಿ ಮಾಡಿವೆ’ ಎಂದು ಅಸ್ಸಾಂನ ಮುಖ್ಯ ಕಾರ್ಯದರ್ಶಿ ಕುಮಾರ್‌ ಸಂಜಯ್‌ ಕೃಷ್ಣ ಅವರು ಟ್ಟೀಟ್‌ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು