ಶನಿವಾರ, ಆಗಸ್ಟ್ 15, 2020
27 °C

ಆಮದು ಮಾಡಿಕೊಂಡ ಆಹಾರ ಪದಾರ್ಥದಲ್ಲಿ ಕೊರೊನಾ ಪತ್ತೆ: ಉತ್ಪನ್ನ ತಿರಸ್ಕೃರಿಸಿದ ಚೀನಾ

ಎಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್: ಚೀನಾದಲ್ಲಿ ಕೊರೊನಾ ಸೋಂಕು ಪ್ರಕರಣ ತೀವ್ರವಾಗಿ ಕಡಿಮೆಯಾಗಿರುವ ಮಧ್ಯೆಯೇ, ಆಮದು ಆಹಾರ ಪದಾರ್ಥಗಳಲ್ಲಿ ಸೋಂಕು ಪತ್ತೆಯಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. 

ಕಳೆದ ಜೂನ್‌ನಲ್ಲಿ ‌ಬೀಜಿಂಗ್‌ನ ಅತಿದೊಡ್ಡ ಸಗಟು ಮಾರುಕಟ್ಟೆಯ ಆಹಾರ ಪದಾರ್ಥಗಳಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಮದು ಆಹಾರಗಳ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ. 

ಜುಲೈ3 ರಂದು ಸೀಗಡಿ ಉತ್ಪನಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅದರ ತಪಾಸಣೆ ನಡೆಸಿದಾಗ, ಆಮದು ಉತ್ಪನ್ನದ ಹೊರ ಪ್ಯಾಕೇಜಿಂಗ್‌ನಲ್ಲಿ ವೈರಸ್‌ ಪತ್ತೆಯಾಗಿತ್ತು. ಆದರೆ, ಪ್ಯಾಕೆಟ್‌ ಒಳಗೆ ಕೊರೊನಾ ವೈರಸ್‌ ಇರದಿರುವುದು ದೃಢವಾಗಿತ್ತು. ಮಾರ್ಚ್‌ 12ರ ನಂತರ ಮೂರು ಕಂಪನಿಗಳಿಂದ ಆಮದು ಮಾಡಿಕೊಳ್ಳಲಾಗಿದ್ದ ಉತ್ಪನ್ನಗಳಲ್ಲಿ ಕೆಲವನ್ನು ನಾಶಪಡಿಸಲಾಗಿದ್ದು, ಮತ್ತೆ ಕೆಲವನ್ನು ಹಿಂದಿರುಗಿಸಲಾಗಿದೆ ಎಂದು ಕಸ್ಟಮ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು