ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಅಮೆರಿಕದಲ್ಲಿ 43ಲಕ್ಷ ಜನರಿಗೆ ಸೋಂಕು; 1,49ಲಕ್ಷ ಸಾವು

ಅಕ್ಷರ ಗಾತ್ರ

ವಾಷಿಂಗ್ಟನ್:ಅಮೆರಿಕದಲ್ಲಿಕೋವಿಡ್‌–19 ಸೋಂಕು ಇದುವರೆಗೆ ಒಟ್ಟು 43,47,717 ಜನರಲ್ಲಿ ದೃಢಪಟ್ಟಿದ್ದು, ಇದರಲ್ಲಿ 1,49,180ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ 13,55,363 ಮಂದಿ ಗುಣಮುಖರಾಗಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.

ವಿವಿ ಕೇಂದ್ರದ ಮಾಹಿತಿ ಪ್ರಕಾರ ಇದುವರೆಗೆ ಜಗತ್ತಿನಾದ್ಯಂತ ಬರೋಬ್ಬರಿ 1,66,60,138 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 6,58,813 ಸೋಂಕಿತರು ಮೃತಪಟ್ಟಿದ್ದು, ಉಳಿದ 96,99,116 ಮಂದಿ ಗುಣಮುಖರಾಗಿದ್ದಾರೆ.

ಅಮೆರಿಕದ ಬಳಿಕ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವುದು ಬ್ರೆಜಿಲ್‌ ಹಾಗೂ ಭಾರತದಲ್ಲಿ.ಬ್ರೆಜಿಲ್‌ನಲ್ಲಿ ಈ ವರೆಗೆ ಒಟ್ಟು 24,83,191 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ87,618 ಸೋಂಕಿತರು ಮೃತಪಟ್ಟಿದ್ದು,18,68,749 ಮಂದಿ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಸೋಮವಾರ ಸಂಜೆ 8 ರವರೆಗೆ 14,83,157 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 9,52,744 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ4,96,988 ಪ್ರಕರಣಗಳು ಸಕ್ರಿಯವಾಗಿದ್ದು, 33,425 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಃಹಿತಿ ನೀಡಿದೆ.

ರಷ್ಯಾದಲ್ಲಿ 8,22,060, ದಕ್ಷಿಣ ಆಫ್ರಿಕಾದಲ್ಲಿ 4,59,761 ಹಾಗೂ ಮೆಕ್ಸಿಕೊದಲ್ಲಿ 4,02,697 ಸೋಂಕು ಪ್ರಕರಣಗಳು ದಾಖಲಾಗಿವೆ.

ಈ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ 86,889 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 80,508 ಸೋಂಕಿತರು ಗುಣಮುಖರಾಗಿದ್ದು, 4,656 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನೆರೆ ರಾಷ್ಟ್ರಪಾಕಿಸ್ತಾನದಲ್ಲಿ 2,75,225 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 5,865 ಸೋಂಕಿತರು ಮೃತಪಟ್ಟಿದ್ದು,2,42,436 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT