ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | 1.42 ಕೋಟಿ ಕೊರೊನಾ ಸೋಂಕಿತರು, 6.01 ಲಕ್ಷ ಜನ ಸಾವು

ಅಕ್ಷರ ಗಾತ್ರ

ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 1,42,31,248 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 6,01,213 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 79,97,336 ಸೋಂಕಿತರು ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕದಲ್ಲಿ 37,07,023 ಒಟ್ಟು ಕೋವಿಡ್‌ ದೃಢಪಟ್ಟ ಪ್ರಕರಣಗಳು ದಾಖಲಾಗಿದ್ದು,ಈ ವರೆಗೆ 1,40,119 ಮಂದಿ ಸಾವಿಗೀಡಾಗಿದ್ದಾರೆ. 11,22,720 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 20,46,328 ಪ್ರಕರಣಗಳು ಪತ್ತೆಯಾಗಿವೆ.14,47,408 ಸೋಂಕಿತರು ಗುಣಮುಖರಾಗಿದ್ದು, 78,772 ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 10,38,716, ರಷ್ಯಾದಲ್ಲಿ 7,64,215, ಪೆರುವಿನಲ್ಲಿ 3,49,500, ದಕ್ಷಿಣ ಆಫ್ರಿಕಾದಲ್ಲಿ 3,50,879, ಚಿಲಿಯಲ್ಲಿ 3,28,846, ಇಂಗ್ಲೆಂಡ್‌ನಲ್ಲಿ 2,95,632, ಸ್ಪೇನ್‌ನಲ್ಲಿ 2,60,255 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 45,358, ಇಟಲಿಯಲ್ಲಿ 35,042, ಮೆಕ್ಸಿಕೊದಲ್ಲಿ 38,888, ಪ್ರಾನ್ಸ್‌ನಲ್ಲಿ 30,155, ಸ್ಪೇನ್‌ನಲ್ಲಿ 28,420, ಪೆರುವಿನಲ್ಲಿ 12,998, ರಷ್ಯಾದಲ್ಲಿ 12,228, ಚಿಲಿಯಲ್ಲಿ 8,445, ದಕ್ಷಿಣ ಆಫ್ರಿಕಾದಲ್ಲಿ 4,948 ಮತ್ತು ಪಾಕಿಸ್ತಾನದಲ್ಲಿ 5,522 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT