ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಹೊರಟಿತು ರಫೇಲ್‌ ಜೆಟ್: 7 ಸಾವಿರ ಕಿ.ಮೀ. ಪಯಣ, ಒಂದೇ ನಿಲುಗಡೆ

Last Updated 27 ಜುಲೈ 2020, 11:06 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರಾನ್ಸ್‌ ಜತೆ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ ಮೊದಲ ಹಂತದ ಐದು ರಫೇಲ್‌ ಜೆಟ್‌ಗಳು ಭಾರತಕ್ಕೆ ಹೊರಟಿವೆ. ಸೋಮವಾರ ಪಯಣ ಆರಂಭಿಸಿರುವ ಈ ಯದ್ಧ ವಿಮಾನಗಳು ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಗೆ ತಲುಪಲಿವೆ. ಬಳಿಕ ಭಾರತೀಯ ವಾಯುಪಡೆಗೆ ನಿಯೋಜನೆಗೊಳ್ಳಲಿವೆ.

ಈ ಕುರಿತು ಟ್ವೀಟ್‌ ಮಾಡಿರುವ ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಭಾರತದ ವಾಯುಪಡೆ ಸೇರಲಿರುವ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು ಇಂದು ಫ್ರಾನ್ಸ್‌ನಿಂದ ಹಾರಿವೆ. ಇದರೊಂದಿಗೆ, ಭಾರತ–ಫ್ರಾನ್ಸ್ ರಕ್ಷಣಾ ಸಹಕಾರದಲ್ಲಿ ಹೊಸ ಮೈಲಿಗಲ್ಲು ದಾಖಲಾಗಿದೆ ಎಂದು ಉಲ್ಲೇಖಿಸಿದೆ.

ಒಟ್ಟು 36 ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್‌ನೊಂದಿಗೆ 2016ರಲ್ಲಿ ಭಾರತ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಭಾಗವಾಗಿ ಭಾರತಕ್ಕೆ 5 ಯುದ್ಧ ವಿಮಾನಗಳು ರವಾನೆಯಾಗುತ್ತಿವೆ.

ಯುದ್ಧ ವಿಮಾನಗಳು ಭಾರತಕ್ಕೆ ಹೊರಡುವುದಕ್ಕೂ ಮೊದಲು ಫ್ರಾನ್ಸ್‌ನ ಭಾರತ ರಾಯಭಾರಿ ಭಾರತೀಯ ಪೈಲಟ್‌ಗಳೊಂದಿಗೆ ಸಮಾಲೋಚನೆ ‌ನಡೆಸಿದ್ದಾರೆ.

ಒಂದೇ ಕಡೆ ನಿಲುಗಡೆ: ಫ್ರಾನ್ಸ್‌ನಿಂದ ಹೊರಟಿರುವ ವಿಮಾನಗಳು ಸುಮಾರು 7000 ಕಿಲೋ ಮೀಟರ್ ದೂರ ಕ್ರಮಿಸಲಿದ್ದು, ಒಂದೇ ಕಡೆ ಒಂದೇ ಬಾರಿ ನಿಲುಗಡೆ ಮಾಡಲಿದೆ. ಯುಎಇಯಲ್ಲಿರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಈ ನಿಲುಗಡೆ ಮಾಡಲಾಗುತ್ತದೆ ಎಂದೂ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT