ಮಂಗಳವಾರ, ಆಗಸ್ಟ್ 4, 2020
26 °C

ಚೀನಾದ ವಿವಾದಾತ್ಮಕ ಕಾಯ್ದೆ ಜಾರಿ ನಂತರ ಮೊದಲ ಬಾರಿಗೆ ಹಾಂಗ್‌ಕಾಂಗ್‌ ಪ್ರಜೆ ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ನಲ್ಲಿ ಚೀನಾ ತನ್ನ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ಅನುಷ್ಠಾನಕ್ಕೆ ತಂದ ಬೆನ್ನಿಗೇ, ಟಾಂಗ್ ಯಿಂಗ್-ಕಿಟ್ ಎಂಬಾತನನ್ನು ಪ್ರತ್ಯೇಕತೆ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈತ ಹೊಸ ಕಾನೂನಿನಡಿಯಲ್ಲಿ ಬಂಧನಕ್ಕೊಳಗಾದ ಮೊದಲಿಗ ಎಂದು ಎಂದು ಅಲ್ ಜಜೀರಾ ವರದಿ ಮಾಡಿದೆ.

ವರದಿಗಳ ಪ್ರಕಾರ, ಬಂಧಿತನು ಹಾಂಗ್‌ಕಾಂಕ್‌ ಪ್ರತ್ಯೇಕತೆಗೆ ಆಗ್ರಹಿಸಿ ಚೀನಾ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತನ್ನ ಮೋಟಾರ್ ‌ಸೈಕಲ್ ಚಾಲನೆ ಮಾಡುವಾಗ 'ಹಾಂಗ್‌ಕಾಂಗ್ ಅನ್ನು ಮುಕ್ತಗೊಳಿಸಿ, ನಮ್ಮ ಕಾಲದ ಕ್ರಾಂತಿ' ಎನ್ನುವ ಫಲಕವನ್ನು ಹಿಡಿದಿದ್ದರು. 

ಪ್ರತಿಭಟನೆ ವೇಳೆ 23 ವರ್ಷದ ಪ್ರತಿಭಟನಾಕಾರನು ದಾಂಧಲೆ ನಡೆಸಿದ್ದಾನೆ ಮತ್ತು ಕೆಲವು ಅಧಿಕಾರಿಗಳಿಗೆ ತೀವ್ರ ಗಾಯಗಳಾಗಿವೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಚೀನಾವು ಹಾಂಗ್‌ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರುತ್ತಿರುವುದರಿಂದಾಗಿ ಹಲವಾರು ಪ್ರಜಾಪ್ರಭುತ್ವ ಪರ ಕಾರ್ಯಕರ್ತರು ತಮ್ಮ ತಾಯ್ನಾಡಿಗೆ ಫಲಾಯನ ಮಾಡುತ್ತಿದ್ದಾರೆ. ಮಾಜಿ ಸಂಸದ ಮತ್ತು ಪ್ರಜಾಪ್ರಭುತ್ವ ಪರ ಕಾರ್ಯಕರ್ತ ನಾಥನ್ ಲಾ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಹಾಂಕಾಂಗ್ ತೊರೆದಿರುವುದಾಗಿ ಗುರುವಾರ ಘೋಷಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಅವರು ಎಲ್ಲಿಗೆ ಹೋಗಿದ್ದಾರೆ ಅಥವಾ ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆಯೇ ಎನ್ನುವ ಕುರಿತು ಅವರು ಪ್ರಸ್ತಾಪಿಸದಿದ್ದರೂ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಚಳುವಳಿಯನ್ನು ಮುಂದುವರಿಸಲು ನಗರವನ್ನು ತೊರೆದಿರುವುದಾಗಿ ತಿಳಿಸಿದ್ದಾರೆ.

ಬೀಜಿಂಗ್ ಹಾಂಗ್‌ಕಾಂಗ್‌ಗೆ ವಿರುದ್ಧವಾದ ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ, ಕಾರ್ಯಕರ್ತರಾದ ಜೋಶುವಾ ವಾಂಗ್, ನಾಥನ್ ಲಾ, ಜೆಫ್ರಿ ಎನ್‌ಗೊ ಮತ್ತು ಆಗ್ನೆಸ್ ಚೌ ಅವರು ಪ್ರಜಾಪ್ರಭುತ್ವ ಪರ ಗುಂಪಾದ ಡೆಮೋಸಿಸ್ಟೊದಿಂದ ಹೊರನಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು