ಗುರುವಾರ , ಆಗಸ್ಟ್ 5, 2021
27 °C
ಚೀನಾದಿಂದ ನೂತನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ

ಹಾಂಗ್‌ಕಾಂಗ್‌ ಪೊಲೀಸರಿಗೆ ಸಂಪೂರ್ಣ ಅಧಿಕಾರ, ಟಿಕ್‌ಟಾಕ್ ಸೇವೆ ಸ್ಥಗಿತ

ಎಪಿ Updated:

ಅಕ್ಷರ ಗಾತ್ರ : | |

Prajavani

ಹಾಂಗ್‌ಕಾಂಗ್‌: ಚೀನಾ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಗ್‌ಕಾಂಗ್‌ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದೆ. ಇದರಿಂದ ಹಾಂಗ್‌ಕಾಂಗ್‌ ಪ್ರಜೆಗಳ ಚಲನವಲನಗಳ ಮೇಲೆ ಮತ್ತಷ್ಟು ನಿರ್ಬಂಧ ಹೇರಿದಂತಾಗಿದೆ.

ವಿಶೇಷ ಸಂದರ್ಭಗಳಲ್ಲಿ ಯಾವುದೇ ವಾರಂಟ್‌ ಇಲ್ಲದೇ ಶೋಧ ಕಾರ್ಯ ಕೈಗೊಳ್ಳಲು, ನಗರವನ್ನು ತೊರೆಯದಂತೆ  ಹಾಗೂ ಸಂವಹನದ ಮೇಲೆ ನಿರ್ಬಂಧ ಹೇರುವುದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. 

ಇಂಟರ್‌ನೆಟ್‌, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಬರಹ, ಕಿರುಸಂದೇಶಗಳಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬರಲಿದೆ ಎಂಬ ಶಂಕೆ ಬಂದರೆ, ಅಂಥ ಬರಹ, ಸಂದೇಶಗಳನ್ನು ತೆಗೆದು ಹಾಕುವಂತೆ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಕಂಪನಿಗಳಿಗೆ ಆದೇಶ ನೀಡುವ ಅಧಿಕಾರವನ್ನೂ ಪೊಲೀಸರಿಗೆ ನೀಡಲಾಗಿದೆ. 

ಈ ಆದೇಶವನ್ನು ಪಾಲಿಸದವರಿಗೆ ಆರು ತಿಂಗಳು ಜೈಲು ಹಾಗೂ ₹ 9.6 ಲಕ್ಷ (1 ಲಕ್ಷ ಹಾಂಗ್‌ಕಾಂಗ್‌ ಡಾಲರ್‌) ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. 

ಸೇವೆ ಸ್ಥಗಿತ: ಟಿಕ್‌ಟಾಕ್‌
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಿಗಿ ನಿಯಮಗಳನ್ನು ಹೇರಿದ ಕಾರಣ, ಹಾಂಗ್‌ಕಾಂಗ್‌ನಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟಿಕ್‌ಟಾಕ್‌ ಮಂಗಳವಾರ ಹೇಳಿದೆ.

ಕಾಯ್ದೆಯಿಂದ ತಮ್ಮ ಸೇವೆಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗಲಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರ ಆಧಾರದ ಮೇಲೆ ಸೇವೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌, ಗೂಗಲ್‌ ಸಹ ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು