ಮಂಗಳವಾರ, ಸೆಪ್ಟೆಂಬರ್ 29, 2020
25 °C

ಜಮ್ಮು ಕಾಶ್ಮೀರ, ಗುಜರಾತಿನ ಭೂಭಾಗವಿರುವ ಪಾಕ್ ಭೂಪಟ ಟ್ವೀಟಿಸಿದ ಇಮ್ರಾನ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Pak- india

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರ, ಗುಜರಾತಿನ ಕೆಲವು ಭೂಭಾಗಗಳನ್ನು ಹೊಂದಿರುವ ಪಾಕಿಸ್ತಾನದ ಹೊಸ ರಾಜಕೀಯ ಭೂಪಟವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಬಿಡುಗಡೆ ಮಾಡಿರುವುದಾಗಿ ಟ್ವೀಟಿಸಿದ್ದಾರೆ.

ಮಂಗಳವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಇದು ಐತಿಹಾಸಿಕ ದಿನ. ಈ ಭೂಪಟವನ್ನೇ ಶಾಲೆ, ಕಾಲೇಜು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಿಸಲಾಗುವುದು. ಈ ಭೂಪಟವನ್ನು ಪಾಕಿಸ್ತಾನ, ಕಾಶ್ಮೀರದ ರಾಜಕೀಯ ನಾಯಕರು ಮಾತ್ರವಲ್ಲದೆ ವಿಪಕ್ಷ ನಾಯಕರು ಅಂಗೀಕರಿಸಿದ್ದಾರೆ ಮತ್ತು ಶ್ಲಾಘಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಭೂಪಟದಲ್ಲಿನ ಬದಲಾವಣೆ ಮತ್ತು ಸೇರ್ಪಡೆಗಳನ್ನು ಎತ್ತಿ ತೋರಿಸುವಾಗ ಪಾಕಿಸ್ತಾನ ಎಲ್ಲಿದೆ ಎಂಬುದನ್ನು ಇದು ಜಗತ್ತಿಗೇ ತೋರಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.

 ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಪ್ರದೇಶವನ್ನು ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಅಥವಾ ಭಾರತ ಆಕ್ರಮಿತ ಕಾಶ್ಮೀರ ಎಂದು ಹೇಳುವ ಬದಲು ಐಐಒಜೆಕೆ (ಭಾರತ ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ) ಎಂದು ಗುರುತಿಸಲಾಗುವುದು ಎಂದು ಪಾಕ್ ಸರ್ಕಾರ ಹೇಳಿದೆ.

ಈ ಹಿಂದೆಯೇ  ಆಗಸ್ಟ್ 5ನೇ ತಾರೀಖನ್ನು ಯೋಮ್ ಎ ಇತೇಸಲ್ ಎಂದು ಆಚರಿಸಲು ಪಾಕಿಸ್ತಾನ ಸರ್ಕಾರ ಸೂಚಿಸಿತ್ತು.

ಭಾರತೀಯ ಮಿಲಿಟರಿ ಕಾನೂನುಬಾಹಿರವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿಕೊಂಡು ಆಗಸ್ಟ್ 5ಕ್ಕೆ ಒಂದು ವರ್ಷವಾಗುತ್ತದೆ. ಆ ದಿನವನ್ನು ಯೋಮ್ ಎ ಇತೇಸಲ್ ಎಂದು ಆಚರಿಸಲಾಗುವುದು ಎಂಬುದಾಗಿ ಎರಡು ದಿನಗಳ ಹಿಂದೆ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ವಿಡಿಯೊವೊಂದನ್ನು ಶೇರ್ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು