ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಒಸಾಮ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

Last Updated 25 ಜೂನ್ 2020, 14:58 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ದೇಶದ ಸಂಸತ್‌ ಅಧಿವೇಶನದಲ್ಲಿ ಭಯೋತ್ಪಾದಕ ಒಸಾಮ ಬಿನ್‌ ಲಾಡೆನ್‌ನನ್ನು ‘ಶಹೀದ್‌ (ಹುತಾತ್ಮ)’ ಎಂದು ಬಣ್ಣಿಸಿದ್ದಾರೆ.

ಲಾಡೆನ್‌ನನ್ನು ಹುತಾತ್ಮ ಎಂದು ಕರೆದ ಪಾಕಿಸ್ತಾನದ ಪ್ರಧಾನಿ ಖಾನ್‌ ಅವರ ವಿಡಿಯೊ ಈಗ ಜಾಗತಿವಾಗಿ ಟ್ರೋಲ್‌ ಆಗಿದೆ. ಅದರಲ್ಲಿ ಅವರು, 'ನಮಗೆ ಗೊತ್ತಿಲ್ಲದೇ ಅಮೆರಿಕ ಸೇನೆ ಅಬೊಟಾಬಾದ್‌ಗೆ ಬಂದು ಒಸಾಮ ಬಿನ್‌ ಲಾಡೆನ್‌ ಅವರನ್ನು ಅಂತ್ಯಗೊಳಿಸಿದರು. ಲಾಡೆನ್‌ ಹುತಾತ್ಮರಾದರು. ಆಗ ನಾವು ಜಾಗತಿಕವಾಗಿ ಅಪಮಾನಕ್ಕೀಡಾದೆವು,’ ಎಂದು ಅವರು ಸಂಸತ್‌ನಲ್ಲಿ ಹೇಳಿದ್ದಾರೆ.

‘ಅಮೆರಿಕ ಪಾಕಿಸ್ತಾನದ ನೆಲದಲ್ಲೇ ಲಾಡೆನ್‌ನನ್ನು ಕೊನೆಗಾಣಿಸಿದಾಗ ವಿಶ್ವದ ಹಲವರು ರಾಷ್ಟ್ರಗಳು ನಮ್ಮನ್ನು ದೂಷಿಸಿದವು. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಾವು ಹಲವು ವರ್ಷಗಳ ಕಾಲ ಅಮಾನಕ್ಕೆ ಈಡಾಗಿದ್ದೇವೆ. ಅಮೆರಿಕ ನಡೆಸಿದ ಭಯೋತ್ಪಾದನೆಯ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಈ ವರೆಗೆ 70 ಸಾವಿರ ಪಾಕಿಸ್ತಾನಿಯರು ಹತರಾಗಿದ್ದಾರೆ,’ ಎಂದೂ ಅವರು ಅಮೆರಿಕ ವಿರುದ್ಧ ಕಿಡಿ ಕಾರಿದರು.

ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡಗಳ ಮೇಲಿನ ದಾಳಿ, 9/11ರ ಮಾಸ್ಟರ್ ಮೈಂಡ್‌ ಎನಿಸಿಕೊಂಡಿದ್ದ, ಅಲ್‌ಖೈದಾ ಉಗ್ರಗಾಮಿ ಸಂಘನೆಯ ಮುಖ್ಯಸ್ಥನೂ ಆಗಿದ್ದ ಒಸಾಮ ಬಿನ್‌ ಲಾಡೆನ್‌ನನ್ನು 2011ರ ಮೇ 2 ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ನೌಕಾದಳದ ಸೀಲ್‌ ಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ಕೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT