ಭಾನುವಾರ, ಜೂಲೈ 5, 2020
22 °C

ಟ್ರಂಪ್‍ ಕುರಿತ ಪುಸ್ತಕ ಪ್ರಕಟಣೆಗೆ ತಡೆ ಕೋರಿ ಸಹೋದರ ರಾಬರ್ಟ್ ಟ್ರಂಪ್‍ ಅರ್ಜಿ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಅವರನ್ನು ಕುರಿತಾದ ಪುಸ್ತಕದ ಪ್ರಕಟಣೆ ನಿರ್ಬಂಧಿಸಲು ಕೋರಿ ಅವರ ಸಹೋದರ ರಾಬರ್ಟ್ ಟ್ರಂಪ್‍ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ನ್ಯೂಯಾರ್ಕ್ ಸಿಟಿ ಕೋರ್ಟ್ ಈ ಹಿಂದೆ ಇಂಥ ಮನವಿ ತಿರಸ್ಕರಿಸಿತ್ತು. ದಾಯಾದಿ ಮೇರಿ ಟ್ರಂಪ್‍ ಈಗಾಗಲೇ ಕುಟುಂಬದ ಹಲವು ಸದಸ್ಯರ ಜೊತೆಗೆ ಎರಡು ದಶಕಗಳ ಹಿಂದೆಯೇ ಕಾನೂನು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಪುಸ್ತಕವನ್ನು ಪ್ರಕಟಿಸಬಾರದು ಎಂಬ ನಿಯಮವೂ ಒಳಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಮುನ್ನ ಪ್ರಕಟಣೆಗೆ ತಡೆಯಾಜ್ಞೆ ನೀಡಲು ಕೋರಿದ್ದ ಮನವಿಯನ್ನು ಕೆಳಹಂತದ ನ್ಯಾಯಾಲಯ ತಿರಸ್ಕರಿಸಿತ್ತು. ಈ ಪ್ರಕರಣ ತನ್ನ ವ್ಯಾಪ್ತಿಗೆ ಬರದು ಎಂದು ಕಾರಣ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಉನ್ನತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು