ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲೇ ಅತಿ ಹೆಚ್ಚು ಕೋವಿಡ್‌ ಪರೀಕ್ಷೆ: ಡೊನಾಲ್ಡ್‌ ಟ್ರಂಪ್‌

Last Updated 14 ಜುಲೈ 2020, 7:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ‘ಜಗತ್ತಿನಲ್ಲೇ ಕೋವಿಡ್‌–19ನ ಅತಿ ಹೆಚ್ಚು ಪರೀಕ್ಷೆಗಳನ್ನು ಅಮೆರಿಕದಲ್ಲಿ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

‘ಭಾರತ, ಚೀನಾ, ರಷ್ಯಾ, ಬ್ರೆಜಿಲ್‌ಗಿಂತಲೂ ಅಮೆರಿಕದಲ್ಲೇ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಹೀಗಾಗಿಯೇ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಕೆಲವು ದೇಶಗಳಲ್ಲಿ ಜನರು ಆಸ್ಪತ್ರೆಗೆ ತೆರಳಿದಾಗ ಮಾತ್ರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಹೀಗಾಗಿಯೇ ಆ ದೇಶಗಳಲ್ಲಿ ಕಡಿಮೆ ಪ್ರಕರಣಗಳಿವೆ’ ಎಂದು ಹೇಳಿದ್ದಾರೆ.

‘ಬ್ರೆಜಿಲ್‌ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದರೆ, ಅಮೆರಿಕದ ರೀತಿಯಲ್ಲಿ ಬ್ರೆಜಿಲ್‌ನಲ್ಲಿ ಪರೀಕ್ಷೆಯನ್ನು ಕೈಗೊಳ್ಳುತ್ತಿಲ್ಲ. ಅಮೆರಿಕದಲ್ಲಿ ಇದುವರೆಗೆ ಸುಮಾರು 4.5 ಕೋಟಿ ಜನರ ಪರೀಕ್ಷೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಅಮೆರಿಕದಲ್ಲಿ ಸಾವಿಗೀಡಾಗುವವರ ಸಂಖ್ಯೆಯೂ ಕಡಿಮೆ ಇದೆ. ಕೋವಿಡ್‌ ನಿಯಂತ್ರಿಸಲು ನಾವು ಉತ್ತಮ ಯೋಜನೆಗಳನ್ನು ರೂಪಿಸಿದ್ದೇವೆ. ಲಸಿಕೆ ಅಭಿವೃದ್ದಿಪಡಿಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಉತ್ತಮ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

‘ಜಗತ್ತಿಗೆ ಚೀನಾ ಮಾಡಿರುವ ಕೃತ್ಯದ ಬಗ್ಗೆ ಯಾರೂ ಮರೆಯಬಾರದು. ಇದನ್ನು ಚೀನಾ ವೈರಸ್‌ ಎಂದೇ ಕರೆಯಬೇಕು. ಇನ್ನೂ ಇದಕ್ಕೆ 20ಕ್ಕೂ ಹೆಚ್ಚು ವಿವಿಧ ಹೆಸರುಗಳಿವೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT