ಭಾನುವಾರ, ಆಗಸ್ಟ್ 1, 2021
27 °C
ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ

ಚೀನಾದ ಕಮ್ಯುನಿಸ್ಟ್‌ ಪಕ್ಷದ ಸದಸ್ಯರಿಗೆ ನಿಷೇಧ: ಅಮೆರಿಕ ಚಿಂತನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಸದಸ್ಯರು ಮತ್ತು ಅವರ ಕುಟುಂಬದವರಿಗೆ ಪ್ರವಾಸ ನಿಷೇಧ ಹೇರುವ ಬಗ್ಗೆ ಅಮೆರಿಕ ಗಂಭೀರ ಚಿಂತನೆ ನಡೆಸಿದೆ.

ಒಂದು ವೇಳೆ ಅಮೆರಿಕ ಈ ರೀತಿ ಕ್ರಮಕೈಗೊಂಡರೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಕರಡು ಪ್ರತಿ ತಯಾರಿಸುವ ಕಾರ್ಯ ನಡೆದಿದೆ. 2017ರಲ್ಲಿ ಇರಾನ್‌, ಸುಡಾನ್‌ ಮತ್ತು ಯೆಮನ್‌ ಸೇರಿದಂತೆ ಕೆಲವು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ವಿಧಿಸಲಾಗಿದ್ದ ನಿಷೇಧದ ರೀತಿಯಲ್ಲೇ ಈ ಬಾರಿಯೂ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ‘ವಲಸೆ ಮತ್ತು ರಾಷ್ಟ್ರೀಯ ಕಾಯ್ದೆ’ ಅಡಿಯಲ್ಲಿ ಸರ್ಕಾರ ಮುಂದಿನ ಹೆಜ್ಜೆ ಇಡಬಹುದು ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.

ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿರುವ ವಿದೇಶಿ ನಾಗರಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರುವ ನಿರ್ಧಾರವನ್ನು ಅಧ್ಯಕ್ಷರು ಕೈಗೊಳ್ಳಲು ‘ವಲಸೆ ಮತ್ತು ರಾಷ್ಟ್ರೀಯ ಕಾಯ್ದೆ’ ಅವಕಾಶ ಕಲ್ಪಿಸುತ್ತದೆ. ಆದರೆ, ನಿಷೇಧದ ಬಗ್ಗೆ ಸರ್ಕಾರದ ವತಿಯಿಂದ ಅಧಿಕೃತವಾಗಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಪ್ರವಾಸ ನಿಷೇಧದ ಪ್ರಸ್ತಾವವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸುವ ಸಾಧ್ಯತೆಯೂ ಇದೆ. ವಾಸ್ತವ ಸ್ಥಿತಿ ಮತ್ತು ಕೆಲವು ತೊಡಕುಗಳನ್ನು ವಿಶ್ಲೇಷಿಸಿದಾಗ ಟ್ರಂಪ್‌ ನಿಷೇಧದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದಲ್ಲಿ 9.20 ಕೋಟಿ ಸದಸ್ಯರಿದ್ದಾರೆ. 2018ರಲ್ಲಿ ಸುಮಾರು 30 ಲಕ್ಷ ಚೀನಾ ನಾಗರಿಕರು ಅಮೆರಿಕಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು