ಬುಧವಾರ, ಜುಲೈ 28, 2021
28 °C

ಅಮೆರಿಕ ನೌಕಾಪಡೆಯ ಯುದ್ಧ ವಿಮಾನಕ್ಕೆ ಮೊದಲ ಕಪ್ಪು ಮಹಿಳೆ ಪೈಲಟ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಕಿಂಗ್ಸ್‌ವಿಲ್ಲೆ(ಅಮೆರಿಕ): ಅಮೆರಿಕ ನೌಕಾ ಪಡೆಗೆ ಇದೇ ಪ್ರಥಮ ಬಾರಿಗೆ ಕಪ್ಪು ಜನಾಂಗದ ಮಹಿಳೆಯೊಬ್ಬರು ಯುದ್ಧ ವಿಮಾನದ ಪೈಲಟ್‌ ಆಗಿ ಸೇರಿದ್ದಾರೆ.

‘ಇತಿಹಾಸ ಸೃಷ್ಟಿಸಲಾಗಿದೆ’ ಎಂದು ಅಮೆರಿಕ ನೌಕಾಪಡೆ ಟ್ವೀಟ್‌ ಮಾಡಿದೆ. ಲೆಫ್ಟಿನೆಂಟ್‌ ಜೆ.ಜಿ. ಮ್ಯಾಡೆಲೈನ್‌ ಸ್ವೆಗ್ಲೆ ಅವರು ನೌಕಾಪಡೆಯ ಶಾಲೆಯಲ್ಲಿ ತಮ್ಮ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ‘ಫ್ಲೈಟ್‌ ಆಫಿಸರ್‌’  ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಅಮೆರಿಕ ನೌಕಾ ಅಕಾಡೆಮಿಯಿಂದ 2017ರಲ್ಲಿ ಪದವಿ ಪಡೆದಿರುವ ಸ್ವೆಗ್ಲೆ, ವರ್ಜಿನಿಯಾದ ಬರ್ಕೆ ಮೂಲದವರು. ಸ್ವೆಗ್ಲೆ ಸಾಧನೆಗೆ ನೌಕಾಪಡೆಯ ಏರ್ ಟ್ರೈನಿಂಗ್‌ ಕಮಾಂಡ್‌ ಕೇಂದ್ರವು ಹರ್ಷ ವ್ಯಕ್ತಪಡಿಸಿದೆ.

1974ರಲ್ಲಿ ರೋಸ್‌ಮೇರಿ ಮ್ಯಾರಿನರ್‌ ಯುದ್ಧ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು