ಮಂಗಳವಾರ, ಆಗಸ್ಟ್ 3, 2021
21 °C
ಕೊರೊನಾ ವೈರಸ್‌ ಮೂಲದ ಅಧ್ಯಯನ

ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿಗಳ ಭೇಟಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೋವಿಡ್‌–19 ಪಿಡುಗಿನ ಮೂಲವನ್ನು ಪತ್ತೆಮಾಡಲು ಬಂದಿರುವ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞರ ತಂಡವು ಎರಡು ದಿನಗಳ ಕಾಲ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ  ಇದ್ದು, ಅಧ್ಯಯನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲಿಕೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ಒಬ್ಬ ಪ್ರಾಣಿ ಆರೋಗ್ಯ ತಜ್ಞ ಹಾಗೂ ಒಬ್ಬ ಸಾಂಕ್ರಾಮಿಕ ರೋಗ ತಜ್ಞರನ್ನು ಒಳಗೊಂಡಿರುವ ತಂಡವು,  ಪ್ರಾಣಿಯಿಂದ ಕೊರೊನಾ ವೈರಸ್‌ ಮನುಷ್ಯನಿಗೆ ಹೇಗೆ ವರ್ಗಾವಣೆಯಾಯಿತು ಎಂಬ ಭವಿಷ್ಯದ ಅಧ್ಯಯನಕ್ಕಾಗಿ ಸಿದ್ಧತೆಗಳನ್ನು ಮಾಡಲಿದೆ ಎಂದು ಹೇಳಿದೆ.

ಬಾವಲಿಗಳಲ್ಲಿ ಈ ವೈರಸ್‌ ಸೃಷ್ಟಿಯಾಗಿ, ಬೆಕ್ಕು ಅಥವಾ ಚಿಪ್ಪುಹಂದಿ ವಂಶದ ಸಸ್ತನಿಗೆ ಹಬ್ಬಿರಬಹುದು. ಅಲ್ಲಿಂದ ಚೀನಾದ ವುಹಾನ್‌ನಲ್ಲಿರುವ ಮಾಂಸದ ಮಾರುಕಟ್ಟೆಯ ಮೂಲಕವಾಗಿ ಮನುಷ್ಯನ ದೇಹದೊಳಗೆ ಪ್ರವೇಶಿಸಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.

‘ಕೋವಿಡ್‌ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ’ ಎಂದು ಆರೋಪಿಸಿ ಅಮೆರಿಕವು ಈ ಸಂಸ್ಥೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿದೆ. ಅಷ್ಟೇ ಅಲ್ಲದೆ, ‘ಕೊರೊನಾ ವೈರಸ್‌ನ ಮೂಲದ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಳೆದ ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ 120 ರಾಷ್ಟ್ರಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಿಂದ ವಿಶ್ವ ಆರೋಗ್ಯ ಸಂಸ್ಥೆ ಆರಂಭಿಸಿರುವ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು