ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World update Covid-19 | ಮುಂದಿನ ಹಂತ ಅಪಾಯಕಾರಿ, ಸೋಂಕಿತರ ಸಂಖ್ಯೆ 1.01 ಕೋಟಿ

ಅಕ್ಷರ ಗಾತ್ರ

ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ಹಂತ ತುಂಬಾ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟಡ್ರೋಸ್ ಅಧನಂ ಗೆಬ್ರೆಯೇಸಸ್ ವಿಶ್ವದ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲಿದ್ದು, ಸಾವಿನ ಸಂಖ್ಯೆ 5 ಲಕ್ಷ ದಾಟಿದೆ ಎಂದಿದ್ದಾರೆ.

ಕೊರೊನಾ ಸೋಂಕಿನ ಅಂತ್ಯವನ್ನು ನಾವು ಕಂಡಿಲ್ಲ. ಅಲ್ಲದೆ, ಅದರ ಸಂಪೂರ್ಣ ರೂಪವನ್ನೂ ನೋಡಿಲ್ಲ ಎಂದು ವಾಷಿಂಗ್ಟನ್
ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಅಲಿ ಮೊಕದಾದ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಇದು 1918ರಲ್ಲಿ ಸಂಭವಿಸಿ 50 ಕೋಟಿ ನಾಗರಿಕರಿಗೆ ಸೋಂಕು ತಗುಲಿದ ಸ್ಪಾನಿಷ್ ಫ್ಲೂಗಿಂತಲೂ ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ಸೋಂಕು ನಂತರ ಯೂರೋಪ್ ರಾಷ್ಟ್ರಗಳಿಗೆ ತಗುಲಿತು. ನಂತರ ಆರೋಗ್ಯ ಕ್ಷೇತ್ರಗಳಲ್ಲಿ ದುರ್ಬಲವಾಗಿರುವ ಬ್ರೆಜಿಲ್ ಹಾಗೂ ಭಾರತದಂತಹ ರಾಷ್ಟ್ರಗಳನ್ನು ಕಾಡುತ್ತಿದೆ ಎಂದಿದ್ದಾರೆ.

ಭಾನುವಾರ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 1.1 ಕೋಟಿಗೆ ತಲುಪಿದೆ. ಸಾವಿನ ಸಂಖ್ಯೆ 5 ಲಕ್ಷ ದಾಟಿದೆ. ಅಮೆರಿಕಾದಲ್ಲಿ ಮೃತಪಟ್ಟವರ ಸಂಖ್ಯೆ 1.28 ಲಕ್ಷಕ್ಕೆ ತಲುಪಿದೆ. ವಿಶ್ವ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ, ಎರಡನೆ ಸ್ಥಾನದಲ್ಲಿ ಬ್ರೆಜಿಲ್ , ಮೂರನೇ ಸ್ಥಾನದಲ್ಲಿ ರಷ್ಯಾ ಇವೆ. ನಂತರದ ಸ್ಥಾನದಲ್ಲಿ ಬ್ರಿಟನ್ ಹಾಗೂ ಸ್ಪೇನ್ ರಾಷ್ಟ್ರಗಳಿವೆ.

ವಿಶ್ವದಾದ್ಯಂತ 10,129,054 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ವೈದ್ಯರ ಚಿಕಿತ್ಸೆ, ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ54.93 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿಶ್ವದಲ್ಲಿ 41.33 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಕರಣಗಳೂ (502,189) ಹಾಗೂ ಗುಣಮುಖರಾದವರನ್ನೂ (5,493,601) ಸೇರಿ ಒಟ್ಟು 5,995,790 ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಇಲ್ಲಿಯವರೆಗೆ 537,957 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಸತ್ತವರ ಸಂಖ್ಯೆ 16,247ಕ್ಕೆ ಏರಿದೆ. ಬ್ರಿಟನ್‌‌ನಲ್ಲಿ
310,250 ಪ್ರಕರಣಗಳು ದಾಖಲಾಗಿವೆ. 43,514 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 240,136 ಪ್ರಕರಣಗಳು ದಾಖಲಾಗಿದ್ದು,,
34,716 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌‌ನಲ್ಲಿ 295,549 ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನದಲ್ಲಿ 202,955 ಪ್ರಕರಣಗಳು ದಾಖಲಾಗಿದ್ದು, 4,118 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT