ರಾಜಣ್ಣನ ಮಗ: ಅದೇ ಮಚ್ಚು, ರೌಡಿಸಂ ಹುಚ್ಚು
ನಾಯಕ ರೌದ್ರಾವತಾರ ತಾಳಿ ಖಡಕ್ ಡೈಲಾಗ್ ಹೇಳಬೇಕು. ಬಳಿಕ ಮಾರುದ್ದದ ಮಚ್ಚುಗಳನ್ನು ಬೀಸಬೇಕು. ಕೈಯಲ್ಲಿನ ಫಳ ಫಳ ಹೊಳೆವ ಗನ್ ಬುಲೆಟ್ ಉಗುಳಬೇಕು. ತಕ್ಷಣವೇ ಪುಡಿ ರೌಡಿಗಳ ಹೆಣ ಉರುಳಬೇಕು. ಆಗಲೇ ಭೂಗತಲೋಕದ ಕಥಾನಕ ಗರಿಗೆದರುವುದು. ಲಾಗಾಯ್ತಿನಿಂದಲೂ ಕನ್ನಡದ ಪ್ರೇಕ್ಷಕರು ಇಂತಹ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ‘ರಾಜಣ್ಣನ ಮಗ’ ಸಿನಿಮಾದ್ದೂ ಇದೇ ಕಥೆ.Last Updated 15 ಮಾರ್ಚ್ 2019, 10:50 IST