ಮೊಬೈಲ್ ಇಂಟರ್ನೆಟ್ ಜನಪ್ರಿಯತೆ ಮತ್ತು ‘3ಜಿ’ ದತ್ತಾಂಶ ಸೇವೆಗಳಿಂದ ದೇಶದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 145 ಲಕ್ಷ ಸ್ಮಾರ್ಟ್ಫೋನ್ಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ 219ರಷ್ಟು ಹೆಚ್ಚಳ!

‘3ಜಿ’ ಜಾದೂ
ವಿಶೇಷವೆಂದರೆ ಒಟ್ಟು ಮಾರಾಟವಾದ ಹ್ಯಾಂಡ್ಸೆಟ್ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವು ‘3ಜಿ’ ಸೌಲಭ್ಯ ಹೊಂದಿರುವ ಫೋನ್ಗಳು.
‘ರೂ.2ರಿಂದ ರೂ.3 ಸಾವಿರಕ್ಕೆ ಸ್ಮಾರ್ಟ್ಪೋನ್ಗಳು ಲಭಿಸುತ್ತಿವೆ. ಯುವಜನರಲ್ಲಿ ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚುತ್ತಿದೆ. ಕೈಗೆಟಕುವ ದರದಲ್ಲಿ ‘3ಜಿ’ ಅಂತರ್ಜಾಲ ಸಂಪರ್ಕ ಸೇವೆಯೂ ಲಭ್ಯವಿದೆ.

ಜತೆಗೆ ದೊಡ್ಡ ದೃಶ್ಯ ಪರದೆಯ ಫೋನ್ಗಳನ್ನು ಖರೀದಿಸಬೇಕೆಂಬ ಪ್ರವೃತ್ತಿ ಕೂಡ ಸ್ಮಾರ್ಟ್ಫೋನ್ ಮಾರಾಟಕ್ಕೆ ಪ್ರಮುಖ ಕಾರಣ’ ಎನ್ನುತ್ತದೆ ಸೈಬರ್ ಮೀಡಿಯಾ ರೀಸರ್ಚ್ನ (ಎಸ್ಎಂಆರ್) ಇತ್ತೀಚಿನ ವರದಿ.

ಹಾಗೆ ನೋಡಿದರೆ ಸ್ಮಾರ್ಟ್ಫೋನ್ ಮಾರಾಟ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 1.9ರಷ್ಟು ಏರಿಕೆ ಕಂಡಿದೆ. 2013ನೇ ಸಾಲಿನ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ 142 ಲಕ್ಷ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದವು. 2014ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಟ್ಟು 589 ಲಕ್ಷ ಮೊಬೈಲ್ ಹ್ಯಾಂಡ್ಸೆಟ್ಗಳು ಮಾರಾಟವಾಗಿವೆ. 2013ನೇ ಸಾಲಿಗೆ ಹೋಲಿಸಿದರೆ ಇದು ಶೇ 8.9ರಷ್ಟು ಅಧಿಕ ಪ್ರಮಾಣ. ಇದೇ ವೇಳೆ, ಫೀಚರ್ ಫೋನ್ಗಳ ಮಾರಾಟ ಶೇ 6.5ರಷ್ಟು ಕುಸಿದಿದ್ದು 444 ಲಕ್ಷಕ್ಕೆ ಇಳಿಕೆ ಕಂಡಿದೆ.

‘ಮೊಬೈಲ್ ಮೂಲಕ ಇಂಟರ್ನೆಟ್ ದತ್ತಾಂಶ ಬಳಸುತ್ತಿರುವವರೇ ಸ್ಮಾರ್ಟ್ಫೋನ್ನ ಪ್ರಮುಖ ಗ್ರಾಹಕರು. ಬಹುವಿಧ ಉದ್ದೇಶಗಳಿಗಾಗಿ ಇವರು ಸ್ಮಾರ್ಟ್ಫೋನ್ ಬಳಸುತ್ತಾರೆ. ತಮ್ಮ ಸೇವಾ ಆಯ್ಕೆ ಬದಲಾದ ಹಾಗೆ ಹ್ಯಾಂಡ್ಸೆಟ್ ಕೂಡ ಬದಲಿಸುತ್ತಿರುತ್ತಾರೆ. ಹೀಗಾಗಿ ಕಡಿಮೆ ದರದಲ್ಲಿ ಹೆಚ್ಚಿನ ತಾಂತ್ರಿಕ ಸೌಲಭ್ಯ ಲಭ್ಯವಿರುವ ಹ್ಯಾಂಡ್ಸೆಟ್ ಮಾರಾಟ ಸಹಜವಾಗಿಯೇ ಹೆಚ್ಚಿರುತ್ತದೆ’ ಎನ್ನುತ್ತಾರೆ ‘ಸಿಎಂಆರ್’ನ ವಿಶ್ಲೇಷಕ ತರುಣ್ ಪಾಠಕ್.

ಸ್ಯಾಮ್ಸಂಗ್ ನಂ.1
ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 43.2ರಷ್ಟು ಪಾಲಿನೊಂದಿಗೆ ಸ್ಯಾಮ್ಸಂಗ್ ನಂ.1 ಸ್ಥಾನದಲ್ಲಿದೆ. ಶೇ 17.5ರಷ್ಟು ಮತ್ತು ಶೇ 5.2ರಷ್ಟು ಪಾಲು ಹೊಂದಿರುವ ಮೈಕ್ರೊಮ್ಯಾಕ್ಸ್ ಮತ್ತು ಕಾರ್ಬನ್ ಕಂಪೆನಿಗಳು ನಂತರದ ಸ್ಥಾನಗಳಲ್ಲಿವೆ. ದೇಶದಲ್ಲಿ ಒಟ್ಟು ಮಾರಾಟವಾಗುತ್ತಿರುವ ಎಲ್ಲ ಶ್ರೇಣಿಯ ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿಯೂ ಸಹ ಸ್ಯಾಮ್ಸಂಗ್ ಮೊದಲ ಸ್ಥಾನದಲ್ಲಿದೆ. ಸಮಗ್ರ ಮಾರುಕಟ್ಟೆಯಲ್ಲಿ ಅದರ ಪಾಲು ಶೇ 20.3ರಷ್ಟಿದೆ. ಶೇ 17.6ರಷ್ಟು ಪಾಲು ಹೊಂದಿರುವ ನೋಕಿಯಾ ಮತ್ತು ಶೇ 11.2ರಷ್ಟು ಪಾಲು ಹೊಂದಿರುವ ಮೈಕ್ರೊಮ್ಯಾಕ್ಸ್ ನಂತರದ ಸ್ಥಾನಗಳಲ್ಲಿವೆ.

72 ಕೋಟಿ ಚಂದಾದಾರರು
ದೇಶದ ‘ಜಿಎಸ್ಎಂ’ ಚಂದಾದಾರರ ಸಂಖ್ಯೆ ಏಪ್ರಿಲ್ನಲ್ಲಿ 49.7 ಲಕ್ಷದಷ್ಟು ಏರಿಕೆ ಕಂಡಿದ್ದು 72.69 ಕೋಟಿ ತಲುಪಿದೆ ಎಂದು ಭಾರತೀಯ ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ. ಮಾರ್ಚ್ ಅಂತ್ಯಕ್ಕೆ ‘ಜಿಎಸ್ಎಂ’ ಚಂದಾದಾರರ ಸಂಖ್ಯೆ 72.19 ಕೋಟಿಯಷ್ಟಿತ್ತು.

ಏಪ್ರಿಲ್ನಲ್ಲಿ ಭಾರ್ತಿ ಏರ್ಟೆಲ್ನ ಬಳಕೆದಾರರ ಸಂಖ್ಯೆ 11.92 ಲಕ್ಷದಷ್ಟು ಹೆಚ್ಚಿದ್ದು, 20.65 ಕೋಟಿಗೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಏರ್ಟೆಲ್ ಹೊಂದಿದ್ದು ಶೇ 28.42ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಶೇ 23.01ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ವೋಡಾಫೋನ್ ಬಳಕೆದಾರರ ಸಂಖ್ಯೆ ಏಪ್ರಿಲ್ನಲ್ಲಿ 7.31ಲಕ್ಷದಷ್ಟು ಹೆಚ್ಚಿದ್ದು, 16.72 ಕೋಟಿಗೆ ಏರಿಕೆ ಕಂಡಿದೆ. ಐಡಿಯಾ ಸೆಲ್ಯುಲರ್ ತನ್ನ ಸೇವಾ ವ್ಯಾಪ್ತಿಗೆ 7.70 ಲಕ್ಷ ಗ್ರಾಹಕರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಬಳಕೆದಾರರ ಸಂಖ್ಯೆಯನ್ನು 13.65 ಕೋಟಿಗೆ ಹೆಚ್ಚಿಸಿಕೊಂಡಿದೆ.

ಏರ್ಸೆಲ್ ಮತ್ತು ಯುನಿನಾರ್ ಏಪ್ರಿಲ್ನಲ್ಲಿ ಕ್ರಮವಾಗಿ 9.98 ಲಕ್ಷ ಮತ್ತು 9.68 ಲಕ್ಷ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿವೆ. ವಿಡಿಯೊಕಾನ್ 2.95 ಲಕ್ಷ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದ್ದು ಗ್ರಾಹಕರ ಸಂಖ್ಯೆಯನ್ನು 52.82 ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ‘ಎಂಟಿಎನ್ಎಲ್’ ಗ್ರಾಹಕರ ಸಂಖ್ಯೆ 12 ಸಾವಿರದಷ್ಟು ಹೆಚ್ಚಿದ್ದು 32.57 ಲಕ್ಷಕ್ಕೆ ಏರಿಕೆ ಕಂಡಿದೆ. ಆದರೆ, ಸರ್ಕಾರಿ ಸ್ವಾಮ್ಯದ ‘ಬಿಎಸ್ಎನ್ಎಲ್’ ಏಪ್ರಿಲ್ ತಿಂಗಳ ಚಂದಾದಾರರ ಸಂಖ್ಯೆಯನ್ನೇ ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.