ಹಾಂಗ್‌ಝೌ : ಭಾರತದ ಜಿಮ್ನಾಸ್ಟ್ ಪ್ರಣತಿ ನಾಯಕ್ ಅವರು ಗುರುವಾರ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಜಿಮ್ನಾಸ್ಟಿಕ್ಸ್ ವಾಲ್ಟ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಎಡವಿದರು.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿರುವ ಪಶ್ಚಿಮ ಬಂಗಾಳದ 28 ವರ್ಷದ ಆಟಗಾರ್ತಿ, ತನ್ನ ಎರಡು ವಾಲ್ಟ್‌ಗಳ ನಂತರ 12.350 ಅಂಕಗಳೊಂದಿಗೆ 8ನೇ ಸ್ಥಾನ ಪಡೆದರು.

ಪ್ರಣತಿ ಅವರು ತನ್ನ ಲ್ಯಾಂಡಿಂಗ್‌ನಲ್ಲಿ ಎಡವಿದರು. ಮೊದಲ ವಾಲ್ಟ್‌ನಲ್ಲಿ 12.100 ಅಂಕ ಸಂಪಾದಿಸಿದರೆ, ಎರಡನೇ ವಾಲ್ಟ್‌ನಲ್ಲಿ 12.600 ಅಂಕ ಗಳಿಸಿದರು. ಆದರೆ, ಪದಕದೆಡೆಗೆ ಸಾಗಲು ಈ ಅಂಕಗಳು ಸಾಕಾಗಲಿಲ್ಲ.

ಉತ್ತರ ಕೊರಿಯಾದ ಚಾಂಗೊಕ್ ಆನ್ ಮತ್ತು ಸೊನ್‌ಹ್ಯಾಂಗ್ ಕಿಮ್ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರೆ, ಚೀನಾದ ಲಿನ್ಮಿನ್ ಯು ಕಂಚಿನ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.