ಗುರುವಾರ , ಫೆಬ್ರವರಿ 20, 2020
23 °C

2020ರಲ್ಲೇ ಭಾರತಕ್ಕೆ 5ಜಿ ಸ್ಮಾರ್ಟ್‌ಫೋನ್‌; 2025ಕ್ಕೆ 14.4 ಕೋಟಿ ಫೋನ್‌ಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

5ಜಿ ಸ್ಮಾರ್ಟ್‌ಫೋನ್‌

ನವದೆಹಲಿ: ಇದೇ ವರ್ಷ ಭಾರತದಲ್ಲಿ 5ಜಿಗೆ ಸಹಕರಿಸುವ ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳಲಿದ್ದು, 2025ರ ವೇಳೆಗೆ ಅಂಥ ಫೋನ್‌ಗಳ ಸಂಖ್ಯೆ 14.4 ಕೋಟಿ ದಾಟಲಿದೆ ಎಂದು ಸೈಬರ್‌ಮೀಡಿಯಾ ರಿಸರ್ಚ್‌ (ಸಿಎಂಆರ್‌) ವರದಿ ತಿಳಿಸಿದೆ. 

2020ರಲ್ಲಿ ಶೇ 1ರಷ್ಟು 5ಜಿ ಮೊಬೈಲ್‌ ಫೋನ್‌ಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿವೆ. ಸ್ಮಾರ್ಟ್‌ಫೋನ್‌ ಬಿಡಿಭಾಗಗಳನ್ನು ತಯಾರಿಸುವ (ಒಇಎಂ) ಸಂಸ್ಥೆಗಳು ದೇಶದ ಮಾರುಕಟ್ಟೆಯಲ್ಲಿ ಆದಷ್ಟು ಬೇಗ ಪ್ರಭುತ್ವ ಸಾಧಿಸುವ ಗುರಿ ಹೊಂದಿವೆ. 

ಈ ವರ್ಷ ಸುಮಾರು 10–12 5ಜಿ ಸ್ಮಾರ್ಟ್‌ಫೋನ್‌ ಮಾದರಿಗಳು ದೇಶದ ಮಾರುಕಟ್ಟೆ ಪ್ರವೇಶಿಸಲಿವೆ. ಚೀನಾ ಮೂಲದ ಸಂಸ್ಥೆಗಳು ಶೀಘ್ರದಲ್ಲೇ 5ಜಿ ಫೋನ್‌ ಅನಾವರಣಗೊಳಿಸಲು ಸಜ್ಜಾಗಿವೆ ಎಂದು ಸಿಎಂಆರ್‌ನ ಇಂಡಸ್ಟ್ರಿ ಇಂಟೆಲಿಜೆನ್ಸ್‌ ಗ್ರೂಪ್‌ (ಐಐಜಿ) ಮುಖ್ಯಸ್ಥ ಪ್ರಭು ರಾಮ್‌ ಹೇಳಿದ್ದಾರೆ. 

ಭಾರತಕ್ಕೆ ಶೇ 85ರಷ್ಟು ಮೊಬೈಲ್‌ ಫೋನ್‌ ಬಿಡಿಭಾಗಗಳು ಚೀನಾದಿಂದ ಆಮದಾಗುತ್ತಿವೆ. ಚೀನಾದಲ್ಲಿ ಕೊರೊನಾ ವೈರಸ್‌ ಪ್ರಭಾವ ತಣಿಯದಿದ್ದರೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು