ಶನಿವಾರ, ಸೆಪ್ಟೆಂಬರ್ 25, 2021
30 °C

iPhone 13: ಸೆ. 14ರಂದು ಆ್ಯಪಲ್ ಇವೆಂಟ್, ಹೊಸ ಐಫೋನ್ ಬಿಡುಗಡೆಗೆ ಸಿದ್ಧತೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple Event 2021

ಬೆಂಗಳೂರು: ಬಹುನಿರೀಕ್ಷಿತ ಆ್ಯಪಲ್ ಇವೆಂಟ್‌ಗೆ ದಿನ ನಿಗದಿಯಾಗಿದೆ. ಸೆ. 14ರಂದು ಮಂಗಳವಾರ ಆ್ಯಪಲ್ ಇವೆಂಟ್ ನಡೆಯಲಿದೆ.

ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30 ಕ್ಕೆ ಆ್ಯಪಲ್ ಹೊಸ ಐಫೋನ್ ಸರಣಿ ಬಿಡುಗಡೆ ಕಾರ್ಯಕ್ರಮ ಆರಂಭವಾಗಲಿದೆ.

ಆ್ಯಪಲ್, ಹೊಸದಾಗಿ ಐಫೋನ್ 13, ಆ್ಯಪಲ್ ವಾಚ್ ಸಿರೀಸ್ 7 ಮತ್ತು ಏರ್‌ಪಾಡ್ಸ್ 3 ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಜತೆಗೆ ಆ್ಯಪಲ್ ನೂತನ ಐಓಎಸ್ 15, ಮ್ಯಾಕ್‌ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್ ಕೂಡ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆ.

ಕೋವಿಡ್ ನಿಯಮಗಳಿಂದಾಗಿ ಈ ಬಾರಿ ಕೂಡ ಆ್ಯಪಲ್ ಇವೆಂಟ್ ಕ್ಯಾಲಿಫೋರ್ನಿಯಾದಿಂದ ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿರಲಿದೆ.

ಆ್ಯಪಲ್ ಇವೆಂಟ್ ಕುರಿತು ಈಗಾಗಲೇ ಆಹ್ವಾನ ಕಳುಹಿಸಿದ್ದು, ಆ್ಯಪಲ್ ಇವೆಂಟ್ ಪೇಜ್ ಮತ್ತು, ಯೂಟ್ಯೂಬ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು