iPhone 13: ದೇಶದ ಮಾರುಕಟ್ಟೆಯಲ್ಲಿ ಇಂದಿನಿಂದ ಲಭ್ಯ, ಬೆಲೆ ಎಷ್ಟಿದೆ?

ಬೆಂಗಳೂರು: ಆ್ಯಪಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಐಫೋನ್ 13 ಸರಣಿ ಶುಕ್ರವಾರ, ಸೆ. 24ರಿಂದ ಭಾರತ ಸಹಿತ ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಐಫೋನ್ 13 ಸರಣಿಯಲ್ಲಿ ಆ್ಯಪಲ್, ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿತ್ತು.
ಆನ್ಲೈನ್ ತಾಣಗಳು ಮತ್ತು ಆ್ಯಪಲ್ ಸ್ಟೋರ್, ಎಲೆಕ್ಟ್ರಾನಿಕ್ಸ್ ರಿಟೇಲ್ ಸ್ಟೋರ್ಗಳ ಮೂಲಕ ನೂತನ ಐಫೋನ್ 13 ಸರಣಿ ದೇಶದಲ್ಲಿ ಲಭ್ಯವಾಗಲಿದೆ.
ಎಚ್ಡಿಎಫ್ಸಿ ಕೊಡುಗೆ
ಐಫೋನ್ 13 ಮತ್ತು ಐಫೋನ್ 13 ಮಿನಿ ಖರೀದಿಗೆ ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ ಬಳಸಿದರೆ ₹6,000 ಕ್ಯಾಶ್ಬ್ಯಾಕ್ ದೊರೆಯಲಿದೆ. ಜತೆಗೆ ಐಫೋನ್ 13 ಪ್ರೊ ಮತ್ತು 13 ಪ್ರೊ ಮ್ಯಾಕ್ಸ್ ಖರೀದಿಗೆ ಎಚ್ಡಿಎಫ್ಸಿ ಕಾರ್ಡ್ ಬಳಕೆಗೆ ₹5,000 ಕ್ಯಾಶ್ಬ್ಯಾಕ್ ಲಭ್ಯವಿದೆ.
ಬೆಲೆ ವಿವರ:
(ಸ್ಟೋರೇಜ್ ಆವೃತ್ತಿಗೆ ಅನುಗುಣವಾಗಿ)
ಆ್ಯಪಲ್ ಐಫೋನ್ 13 ಮಿನಿ
₹69,900 - 128 GB
₹79,900 - 256 GB
₹99,900 - 512 GB
iPhone 13 Price: ಆ್ಯಪಲ್ ಇವೆಂಟ್ 2021ರಲ್ಲಿ ಏನೆಲ್ಲ ಬಿಡುಗಡೆ? ಬೆಲೆ ಎಷ್ಟು?...
ಆ್ಯಪಲ್ ಐಫೋನ್ 13
₹79,900 - 128 GB
₹89,900 - 256 GB
₹109,900 - 512 GB
iPhone 12: ಹೊಸ ಐಫೋನ್ ಬಿಡುಗಡೆ ಬೆನ್ನಲ್ಲೇ ಹಳೆಯ ಆ್ಯಪಲ್ ಫೋನ್ ದರ ಇಳಿಕೆ
ಆ್ಯಪಲ್ ಐಫೋನ್ 13 ಪ್ರೊ
₹1,19,900 - 128 GB
₹1,29,900 - 256 GB
₹1,49,900 - 512 GB
₹1,69,900 - 1 TB
iPhone 13: ಭಾರತಕ್ಕಿಂತ ಕಡಿಮೆ ಬೆಲೆಗೆ ಈ ದೇಶಗಳಲ್ಲಿ ಲಭ್ಯ!
ಆ್ಯಪಲ್ ಐಫೋನ್ 13 ಪ್ರೊ ಮ್ಯಾಕ್ಸ್
₹1,29,900 - 128 GB
₹1,39,900 - 256 GB
₹1,58,900 - 512 GB
₹1,79,900 - 1 TB.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.