ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 12ರಂದು ಆ್ಯಪಲ್ ಈವೆಂಟ್: ವಂಡರ್‌ಲಸ್ಟ್‌ ಎಂದು ಟಿಮ್‌ ಕುಕ್‌ ಕರೆದಿದ್ದೇಕೆ?

Published 30 ಆಗಸ್ಟ್ 2023, 9:32 IST
Last Updated 30 ಆಗಸ್ಟ್ 2023, 9:32 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಆ್ಯಪಲ್‌ನ ವಾರ್ಷಿಕ ಕಾರ್ಯಕ್ರಮ ಸೆ. 12ರಂದು ನಿಗದಿಯಾಗಿದೆ. ಐಫೋನ್ 15 ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿರುವ ಈ ಕಾರ್ಯಕ್ರಮ ಕುರಿತು ಕಂಪನಿ ಮುಖ್ಯಸ್ಥ ಟಿಮ್‌ಕುಕ್‌ ವಂಡರ್‌ಲಸ್ಟ್‌ (ನಿರಂತರ ಹುಡುಕಾಟದ ಹಂಬಲ) ಎಂದು ಕರೆದಿರುವುದು, ಆ್ಯಪಲ್‌ ಮೋಹಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಭಾರತೀಯ ಕಾಲಮಾನ ಪ್ರಕಾರ ಸೆ. 12ರ ರಾತ್ರಿ 10.30ಕ್ಕೆ ಇಲ್ಲಿನ ಸ್ಟೀವ್‌ ಜಾಬ್ ವೇದಿಕೆಯಿಂದ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಐಫೋನ್ 15, ಆ್ಯಪಲ್ ವಾಚ್‌ 9 ಸಿರೀಸ್‌ ವರೆಗೂ ಹಲವು ಉತ್ಪನ್ನಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಜತೆಗೆ ಈ ವರ್ಷಕ್ಕೆ ಕಂಪನಿಯ ಯೋಜನೆಗಳ ಕುರಿತು ಟಿಮ್ ಕುಕ್ ವಿವರಿಸುವ ಸಾಧ್ಯತೆ ಇದೆ. ‌‌

ಆ್ಯಪಲ್ ಕಂಪನಿ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ವಾರ್ಷಿಕ ಕಾರ್ಯಕ್ರಮ ಆಯೋಜಿಸುವುದನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆ. ಇದರಲ್ಲಿ ತಾನು ಅಭಿವೃದ್ಧಿಪಡಿಸಿದ ಹೊಸ ಮಾದರಿಯ ಹಾರ್ಡ್‌ವೇರ್‌ಗಳನ್ನು ಘೋಷಿಸುವುದು ವಾಡಿಕೆ. 

ಅದರಂತೆಯೇ ಈ ವರ್ಷ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್‌ ಬಿಡುಗಡೆಯ ನಿರೀಕ್ಷೆ ಗ್ರಾಹಕರಲ್ಲಿದೆ. ಹೊಸ ಮಾದರಿಯ ವಾಚ್‌ ಕೂಡಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಆ್ಯಪಲ್ ವಾಚ್ ಅಲ್ಟ್ರಾ ಬಿಡುಗಡೆ ಕುರಿತು ಯಾವುದೇ ಮಾಹಿತಿ ಇಲ್ಲ.

ಹೊಸ ಮಾದರಿಯ ಫೋನ್‌ಗಳು ಪೆರಿಸ್ಕೋಪ್ ಕ್ಯಾಮೆರಾ ಹಾಗೂ ಟೈಟಾನಿಯಂ ಫ್ರೇಮ್ ಅನ್ನು ಆ್ಯಪಲ್ ಅಳವಡಿಸಿದೆ ಎಂದು ವರದಿಯಾಗಿದೆ. ಜತೆಗೆ ಹೊಸ ಮಾದರಿಯ ಚಿಪ್‌ಸೆಟ್‌ ಎ17 ಹಾಗೂ 150 ವಾಟ್‌ನ ವೇಗದ ಚಾರ್ಜರ್ ಪರಿಚಯಿಸುವ ಸಾಧ್ಯತೆ ಇದೆ ಎಂದು ಮಿಂಟ್ ವರದಿ ಮಾಡಿದೆ.

ಆ್ಯಪಲ್ ಈವೆಂಟ್‌ನ ಲೊಗೊವನ್ನು ಕಂಪನಿ ಬಿಡುಗಡೆ ಮಾಡಿದೆ. ಟೈಟಾನ್ ಗ್ರೇ ಹಾಗೂ ನೀಲಿ ಬಣ್ಣದ ಫೋನ್‌ ಈ ಬಾರಿಯ ಪ್ರಮುಖ ಆಕರ್ಷಣೆ ಎಂಬ ನಿರೀಕ್ಷೆಯನ್ನೂ ಹಲವರು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT