ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್‌ ಹೊಸ ಫೋನ್‌ ಬಿಡುಗಡೆ: ಐಫೋನ್‌ ಎಸ್‌ಇ, ಆರಂಭಿಕ ಬೆಲೆ ₹42,500

Last Updated 16 ಏಪ್ರಿಲ್ 2020, 8:58 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಆ್ಯಪಲ್‌ ಕಂಪನಿ ಐಫೋನ್‌ ಎಸ್‌ಇ ಸೆಕೆಂಡ್‌ ಎಡಿಷನ್‌ ಬುಧವಾರ ಬಿಡುಗಡೆ ಮಾಡಿದೆ. ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ಕಾರ್ಯಕ್ರಮಗಳಿಲ್ಲದೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಹೊಸ ಫೋನ್‌ ಬಿಡುಗಡೆಯಾಗಿದೆ.

2016ರ ಐಫೋನ್‌ ಎಸ್‌ಇ ಮಾದರಿಯ ಹೊಸ ಆವೃತ್ತಿಯು ಐಫೋನ್‌ 8 ವಿನ್ಯಾಸ ಹಾಗೂ ಐಫೋನ್‌ 11ರಸಾಮರ್ಥ್ಯವನ್ನು ಒಳಗೊಂಡಿದೆ. ಐಫೋನ್‌ 11 ಸರಣಿಯ ಫೋನ್‌ಗಳಲ್ಲಿ ಅಳವಡಿಸಲಾಗಿರುವ ಆ್ಯಪಲ್‌ ಎ13 ಬಯೋನಿಕ್‌ ಚಿಪ್‌ ಇಲ್ಲೂ ಬಳಕೆಯಾಗಿದೆ. 4.7 ಇಂಚು ರೆಟಿನಾ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ಫೋನ್‌, ನೈಸರ್ಗಿಕವಾದ ಹಾಗೂ ಪೇಪರ್‌ ನೋಡುವಂತಹ ಅನುಭವ ನೀಡಲಿದೆ. ಹ್ಯಾಪ್ಟಿಕ್‌ ಟಚ್‌ ತಂತ್ರಜ್ಞಾನವು ವೇಗವಾಗಿ ಕಾರ್ಯಾಚರಿಸಲು ಸಹಕಾರಿಯಾಗುತ್ತದೆ.

64ಜಿಬಿ, 128ಜಿಬಿ ಹಾಗೂ 256ಜಿಬಿ ಮಾದರಿಗಳಲ್ಲಿ ಫೋನ್‌ ಸಿಗಲಿದೆ. ಭಾರತದಲ್ಲಿ ಫೋನ್‌ ಆರಂಭಿಕ ಬೆಲೆ ₹42,500 ನಿಗದಿಯಾಗಿದೆ. ಇ–ಸಿಮ್‌ ವ್ಯವಸ್ಥೆಯೊಂದಿಗೆ ಡ್ಯೂಯಲ್‌ ಸಿಮ್‌ ಕಾರ್ಯಾಚರಣೆ ನಡೆಸಬಹುದಾಗಿದೆ.

ಹೊಸ ಬಯೋಮೆಟ್ರಿಕ್‌ ವ್ಯವಸ್ಥೆಯು ಫೋನ್‌ ಲಾಕ್‌, ಇತರೆ ಅಪ್ಲಿಕೇಷನ್‌ಗಳು ತೆರೆಯುವುದು ಹಾಗೂ ಆ್ಯಪಲ್‌ ಪೇ ವರ್ಗಾವಣೆಯಲ್ಲಿ ಸಹಕಾರಿಯಾಗಿದೆ. ಆ್ಯಪಲ್‌ ಎ13 ಬಯೋನಿಕ್‌ ಚಿಪ್‌ ಇರುವುದರಿಂದ ಐಫೋನ್‌ ಎಸ್‌ಇ 2, ಆ್ಯಪಲ್‌ನ ಮೆಷಿನ್‌ ಲರ್ನಿಂಗ್‌ ಬಳಕೆಗೆ ಅನುವಾಗುತ್ತದೆ. ವೈರ್‌ಲೆಸ್‌ ಚಾರ್ಜಿಂಗ್‌ ಹಾಗೂ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ. 30 ನಿಮಿಷಗಳಲ್ಲಿ ಬ್ಯಾಟರಿ ಶೇ 50ರಷ್ಟು ಚಾರ್ಜ್‌ ಆಗುತ್ತದೆ.

ವೈ–ಫೈ 6 ಮತ್ತು ಗಿಗಾಬಿಟ್‌ ಎಲ್‌ಟಿಇ ಸಂಪರ್ಕ ಆಯ್ಕೆಗಳನ್ನು ಹೊಂದಿದೆ. ಐಫೋನ್‌ ಎಸ್‌ಇ 2ನಲ್ಲಿ ಸ್ಮಾರ್ಟ್‌ ಎಚ್‌ಡಿಆರ್‌, 4ಕೆ ವಿಡಿಯೊ ರೆಕಾರ್ಡಿಂಗ್‌ (60 ಫ್ರೇಮ್ಸ್‌ ‍/ಸೆಕೆಂಡ್‌ ವರೆಗೂ) ಸಾಧ್ಯವಿದ್ದು, ಹಿಂಬದಿಯಲ್ಲಿ 12 ಮೆಗಾಪಿಕ್ಸೆಲ್‌ ಲೆನ್ಸ್‌ ಹಾಗೂ ಸೆಲ್ಫಿಗಾಗಿ 7 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

ಏರೋಸ್ಪೇಸ್‌ ದರ್ಜೆಯ ಅಲ್ಯುಮಿನಿಯಂ ಕವಚಹಾಗೂ ದೀರ್ಘ ಬಾಳಿಕೆ ಬರುವ ಗ್ಲಾಸ್‌ ಒಳಗೊಂಡ ವಿನ್ಯಾಸ ಹೊಂದಿದೆ. 1 ಮೀಟರ್‌ ನೀರಿನ ಆಳದಲ್ಲಿ ಸುಮಾರು 30 ನಿಮಿಷಗಳ ವರೆಗೂ ಫೋನ್‌ ಹಾನಿಯಾಗದಂತೆ ಉಳಿಯಬಲ್ಲದು. ಕಪ್ಪು, ಬಿಳಿ ಹಾಗೂ ಸ್ಪೆಷಲ್‌ ಎಡಿಷನ್‌ ಕೆಂಪು ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT