ಸೋಮವಾರ, ಡಿಸೆಂಬರ್ 6, 2021
27 °C

ಆ್ಯಪಲ್‌ನ ಹೊಸ ಐಪ್ಯಾಡ್ ಏರ್‌ ಬಿಡುಗಡೆ; ಆರಂಭಿಕ ಬೆಲೆ ₹54,900

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಆ್ಯಪಲ್ ಹೊಸ 'ಐಪ್ಯಾಡ್ ಏರ್‌'

ಆ್ಯಪಲ್‌ ಹೊಸ 'ಐಪ್ಯಾಡ್ ಏರ್‌' ಬಿಡುಗಡೆ ಮಾಡಿದೆ. ಇದರಲ್ಲಿ ಆ್ಯಪಲ್‌ನ ಅತ್ಯಾಧುನಿಕ ಎ14 ಬಯೊನಿಕ್ ಚಿಪ್ ಅಳವಡಿಸಿರುವುದರಿಂದ ಕಾರ್ಯನಿರ್ವಹಣೆ ಸಾಮರ್ಥ್ಯದ ಕಾರಣಗಳಿಂದ ಗಮನ ಸೆಳೆದಿದೆ.

ಎ14 ಬಯೋನಿಕ್‌ನಿಂದಾಗಿ ಐಪ್ಯಾಡ್‌ನಲ್ಲೇ 4ಕೆ ಗುಣಮಟ್ಟದ ವಿಡಿಯೊಗಳನ್ನು ಎಡಿಟ್ ಮಾಡಬಹುದು. ಆರ್ಟ್ ವರ್ಕ್‌ಗಳನ್ನು ಸೃಜಿಸುವುದು, ಗೇಮ್‌ಗಳನ್ನು ತಡೆಯಿಲ್ಲದೆ ಆಡಲು ಸಹಕಾರಿಯಾಗುತ್ತದೆ.

10.9 ಇಂಚು ಲಿಕ್ವಿಡ್ ರೆಟಿನಾ ಡಿಸ್ ಪ್ಲೇ, ಹಿಂಬದಿಯಲ್ಲಿ 12ಎಂಪಿ ಕ್ಯಾಮೆರಾ, ಮುಂದೆ 7ಎಂಪಿ ಕ್ಯಾಮೆರಾ ಹಾಗೂ ಹೊಸ‌ ಇಂಟೆಗ್ರೇಟೆಡ್ ಟಚ್ ಐಡಿ ಸೆನ್ಸರ್ ಅಳವಡಿಸಲಾಗಿದೆ. 12ಎಂಪಿ ಕ್ಯಾಮೆರಾ ಮೂಲಕ 4ಕೆ ಗುಣಮಟ್ಟದ ವಿಡಿಯೊ ಚಿತ್ರೀಕರಿಸಬಹುದಾಗಿದೆ.

ಯುಎಸ್‌ಬಿ ಟೈಪ್‌–ಸಿ ಪೋರ್ಟ್‌ ನೀಡಲಾಗಿದ್ದು, 5ಜಿಬಿಪಿಎಸ್‌ ವೇಗದಲ್ಲಿ ಡೇಟಾ ಟ್ರಾನ್ಸ್‌ಫರ್‌ ಮಾಡಿಕೊಳ್ಳಬಹುದಾಗಿದೆ. ಸಿಮ್‌ನಿಂದ ಎಲ್‌ಟಿಇ ಕನೆಕ್ಟಿವಿಟಿ ಹಾಗೂ ವೈಫೈ ಮೂಲಕ ಇಂಟರ್‌ನೆಟ್‌ ಸಂಪರ್ಕಿಸಬಹುದು.

ಐಪ್ಯಾಡ್‌ ಏರ್‌ ವೈಫೈ ಮಾದರಿಯ ಆರಂಭಿಕ ಬೆಲೆ ₹54,900 ಹಾಗೂ ವೈಫೈ+ಸೆಲ್ಯುಲರ್‌ ಮಾದರಿಗಳಿಗೆ ₹66,900 ಆರಂಭಿಕ ಬೆಲೆ ನಿಗದಿಯಾಗಿದೆ. 64ಜಿಬಿ ಮತ್ತು 256 ಜಿಬಿ ಸಂಗ್ರಹ ಸಾಮರ್ಥ್ಯಗಳಲ್ಲಿ ಐಪ್ಯಾಡ್‌ ಲಭ್ಯವಿರಲಿದೆ.

ಸಿಲ್ವರ್, ಸ್ಪೇಸ್ ಗ್ರೇ, ರೋಸ್  ಗೋಲ್ಡ್, ಗ್ರೀನ್ ಹಾಗೂ ಸ್ಕೈ ಬ್ಲೂ ಬಣ್ಣಗಳಲ್ಲಿ ಹೊಸ ವಿನ್ಯಾಸದ, ತೆಳ್ಳಗಿನ ಹಾಗೂ ಇನ್ನಷ್ಟು ಹಗುರವಾಗಿರುವ ಐಪ್ಯಾಡ್ ಸಿಗಲಿದೆ. ಅಕ್ಟೋಬರ್‌ನಿಂದ ಹೊಸ ಐಪ್ಯಾಡ್ ಏರ್ ಗ್ರಾಹಕರ ಕೈಸೇರಲಿದೆ.

ಐಪ್ಯಾಡ್ ಪ್ರೊ, 8ನೇ ಜನರೇಶನ್ ಐಪ್ಯಾಡ್ ಗಳಿಗೆ ಇದೇ ವರ್ಷ ಹೊಸ ಅಪ್ ಗ್ರೇಡ್ ಸಿಗಲಿದೆ. ಐಪ್ಯಾಡ್ ಒಸ್ 14 ಹೊಸ ಗುಣಲಕ್ಷಣಗಳು ಬಿಡುಗಡೆಯಾಗಲಿವೆ.

ಬಿಡುಗಡೆಯಾಗಿರುವ ಇತರೆ ಸಾಧನಗಳು:

* ಆ್ಯಪಲ್‌ ವಾಚ್‌ ಎಸ್‌ಇ ಬಿಡುಗಡೆ ಮಾಡಲಾಗಿದೆ. ಜಿಪಿಎಸ್‌ ಹಾಗೂ ಸೆಲ್ಯುಲರ್‌ ಎರಡೂ ಮಾದರಿಗಳ ವಾಚ್ ಲಭ್ಯವಿದೆ. ಬೆಲೆ ₹29,900 ಹಾಗೂ ₹33,900 ನಿಗದಿಯಾಗಿದೆ.

* ಆ್ಯಪಲ್‌ ವಾಚ್‌ ಸಿರೀಸ್ 6 (ಜಿಪಿಎಸ್)–ಬೆಲೆ ₹40,900; ಇದೇ ಮಾದರಿಯಲ್ಲಿ ಸೆಲ್ಯುಲರ್‌ ಆಯ್ಕೆಯನ್ನೂ ಹೊಂದಿರುವ ವಾಚ್‌ಗೆ ₹49,900 ಬೆಲೆ ನಿಗದಿಯಾಗಿದೆ.

* ಐಪ್ಯಾಡ್‌ ಏರ್‌ ಜೊತೆಗೆ ಬಳಕೆಗೆ ಆ್ಯಪಲ್‌ ಪೆನ್ಸಿಲ್‌ (2nd generation)– ಬೆಲೆ ₹10,900

* ಮ್ಯಾಜಿಕ್‌ ಕೀಬೋರ್ಡ್‌– ಬೆಲೆ ₹27,900

* ಸ್ಮಾರ್ಟ್ ‌ಕೀಬೋರ್ಡ್‌– ಬೆಲೆ ₹15, 900

* ಐಪ್ಯಾಡ್‌ ಏರ್‌ಗಾಗಿ ಸ್ಮಾರ್ಟ್‌ ಫೊಲಿಯೊಸ್ (5 ಬಣ್ಣಗಳಲ್ಲಿ ಲಭ್ಯ)– ಬೆಲೆ ₹7,500

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು