Apple | 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಐಫೋನ್ 14: ಮಿಂಗ್–ಚಿ ಕು

ಬೆಂಗಳೂರು: ಆ್ಯಪಲ್ ಮುಂದೆ ಬಿಡುಗಡೆ ಮಾಡಲಿರುವ ಐಫೋನ್ 14 ಮತ್ತು ಐಫೋನ್ 15 ಕ್ಯಾಮೆರಾದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಮಿಂಗ್–ಚಿ ಕು ವರದಿ ಮಾಡಿದ್ದಾರೆ.
ಮಿಂಗ್–ಚಿ ಕು ಹೇಳಿಕೆಗಳು ಬಹುತೇಕ ಸಂದರ್ಭದಲ್ಲಿ ಹೆಚ್ಚು ನಿಖರವಾಗಿದ್ದು, ಐಫೋನ್ ಮತ್ತು ಇತರ ಗ್ಯಾಜೆಟ್ ಕುರಿತು ಅವರು ವರದಿ ನೀಡುತ್ತಾರೆ.
ಆ್ಯಪಲ್ ಈ ವರ್ಷ ಮಾರುಕಟ್ಟೆಗೆ ಐಫೋನ್ 13 ಸರಣಿ ಬಿಡುಗಡೆ ಮಾಡಿದೆ.
ಮುಂದಿನ ವರ್ಷ ಐಫೋನ್ 14 ಸರಣಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರಲ್ಲಿನ ಕ್ಯಾಮೆರಾದಲ್ಲಿ ಆ್ಯಪಲ್ 48 ಮೆಗಾಪಿಕ್ಸೆಲ್ ಲೆನ್ಸ್ ಬಳಸುವ ಸಿದ್ಧತೆಯಲ್ಲಿದೆ ಎಂದು ಮಿಂಗ್–ಚಿ ಕು ಹೇಳಿದ್ದಾರೆ.
ಮ್ಯಾಕ್ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900!
8K ವಿಡಿಯೊ ರೆಕಾರ್ಡಿಂಗ್ ಸೌಲಭ್ಯವನ್ನೂ ಆ್ಯಪಲ್ ಒದಗಿಸುವ ಸಾಧ್ಯತೆಯಿದೆ. ಈಗ ಮಾರುಕಟ್ಟೆಯಲ್ಲಿರುವ ಐಫೋನ್ 13 ಸರಣಿಯಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾವಷ್ಟೇ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.