ಮಂಗಳವಾರ, ಜನವರಿ 18, 2022
27 °C

ಹೊಸ ಆ್ಯಪಲ್ ಐಫೋನ್ ಎಸ್‌ಇ 5G ಶೀಘ್ರದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE

ಬೆಂಗಳೂರು: ಆ್ಯಪಲ್ ಕಂಪನಿ ನೂತನ ಮಾದರಿಯ ಐಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಹೊಸ ಸರಣಿಯ ಐಫೋನ್ ಎಸ್‌ಇ 5G ಮಾರ್ಚ್ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೊಸ ಐಫೋನ್‌ನಲ್ಲಿ 5G ಸಂಪರ್ಕವನ್ನು ಒದಗಿಸಲು ಆ್ಯಪಲ್ ಮುಂದಾಗಿದೆ. ಅಲ್ಲದೆ, ಈಗಿರುವ ವಿನ್ಯಾಸವನ್ನೇ ಮುಂದುವರಿಸುವ ಸಾಧ್ಯತೆಯಿದೆ.

5G ಬಳಕೆಗೆ ಸೂಕ್ತವಾಗುವಂತೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ನೂತನ ಐಫೋನ್‌ನಲ್ಲಿ ಆ್ಯಪಲ್ ಒದಗಿಸಲಿದೆ.

ಉಳಿದಂತೆ ಆ್ಯಪಲ್ ಬಯಾನಿಕ್ ಚಿಪ್‌ಸೆಟ್, ಕ್ಯಾಮೆರಾದಲ್ಲೂ ಹೊಸ ಐಫೋನ್‌ನಲ್ಲಿ ಹೆಚ್ಚಿನ ಸುಧಾರಣೆಯನ್ನು ಗ್ರಾಹಕರು ನಿರೀಕ್ಷಿಸಬಹುದು ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು