ಬುಧವಾರ, ಮೇ 25, 2022
29 °C

ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

asus

ಬೆಂಗಳೂರು: ವರ್ಕ್ ಫ್ರಮ್ ಹೋಮ್ ಮತ್ತು ಆನ್‌ಲೈನ್ ತರಗತಿಯ ಅವಶ್ಯಕತೆಗೆ ಅನುಕೂಲವಾಗುವ ನೂತನ ಕ್ರೋಮ್‌ಬುಕ್ ಅನ್ನು ಏಸಸ್ ಪರಿಚಯಿಸಿದೆ.

ಏಸಸ್ ಕ್ರೋಮ್‌ಬುಕ್ ಸಿಎಕ್ಸ್ 1101 ಮಾದರಿ 11.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, 13 ಗಂಟೆಗಳ ಬ್ಯಾಟರಿ ಬ್ಯಾಕಪ್ ದೊರೆಯುತ್ತದೆ ಎಂದು ಕಂಪನಿ ಹೇಳಿದೆ.

ನೂತನ ಕ್ರೋಮ್‌ಬುಕ್‌ನಲ್ಲಿ 2 ಯುಎಸ್‌ಬಿ 3.2 ಟೈಪ್ ಸಿ ಮತ್ತು ಟೈಪ್–ಎ ಪೋರ್ಟ್, ಎಚ್‌ಡಿ ಕ್ಯಾಮೆರಾ ವೈಶಿಷ್ಟ್ಯವಿದೆ. 4 GB RAM, 64 GB ಮೆಮೊರಿ ಸೌಲಭ್ಯ  ಇದರಲ್ಲಿದೆ ಎಂದು ಏಸಸ್ ತಿಳಿಸಿದೆ.

ಏಸಸ್ ಕ್ರೋಮ್‌ಬುಕ್‌ನಲ್ಲಿ ಗೂಗಲ್ ಕ್ರೋಮ್ ಓಎಸ್ ಇದ್ದು, ಪ್ಲೇಸ್ಟೋರ್ ಮೂಲಕ ವಿವಿಧ ಆ್ಯ‍ಪ್ ಮತ್ತು ವೆಬ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಬೆಲೆ ಮತ್ತು ಲಭ್ಯತೆ
ಹೊಸ ಕ್ರೋಮ್‌ಬುಕ್ ಸಿಎಕ್ಸ್‌1101 ಬೆಲೆ ₹19,999 ಇದ್ದು, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು. ಆರಂಭಿಕ ಕೊಡುಗೆಯಾಗಿ ಡಿಸೆಂಬರ್ 15 ರಿಂದ 21ರವರೆಗೆ ಖರೀದಿಸುವ ಗ್ರಾಹಕರಿಗೆ ₹18,999 ಆಫರ್ ದರಕ್ಕೆ ದೊರೆಯಲಿದೆ. ಜತೆಗೆ ಎಸ್‌ಬಿಐ ಕೊಡುಗೆ ಇದ್ದು, ಶೇ 10 ರಷ್ಟು ರಿಯಾಯಿತಿ ಮತ್ತು ಇಎಂಐ ಕೂಡ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು