ಗುರುವಾರ , ಡಿಸೆಂಬರ್ 1, 2022
27 °C
ಆ್ಯಪಲ್ ಹೊಸ ಸರಣಿಯ ಐಫೋನ್ 14 ಪ್ರೊಗೆ ಹೆಚ್ಚಿದ ಬೇಡಿಕೆ

ಐಪೋನ್ 14 Pro ಮಾದರಿಗೆ ಅಧಿಕ ಬೇಡಿಕೆ: ಉತ್ಪಾದನೆ ಹೆಚ್ಚಿಸಲು ಆ್ಯಪಲ್ ಸೂಚನೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ಲೋಕದ ಪ್ರಮುಖ ಸಂಸ್ಥೆ ಆ್ಯಪಲ್, ಗ್ಯಾಜೆಟ್ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದ್ದ ಐಪೋನ್ 14 ಸರಣಿಯಲ್ಲಿನ ಐಪೋನ್ 14 ಪ್ರೊ ಮಾದರಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ.

ಹೀಗಾಗಿ ಐಫೋನ್ 14 ಬದಲಿಗೆ ಐಪೋನ್ 14 ಪ್ರೊ ಮಾದರಿಗಳನ್ನೇ ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುವಂತೆ ಆ್ಯಪಲ್ ಸೂಚಿಸಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸಲು ಮತ್ತು ವರ್ಷಾಂತ್ಯದ ಕೊಡುಗೆಗಳಿಗೆ ಪೂರಕವಾಗಿ ಹೆಚ್ಚಿನ ಸಂಖ್ಯೆಯ ಐಫೋನ್ 14 Pro ಮಾದರಿಗಳನ್ನು ಮಾರಾಟ ಮಾಡಲು ಆ್ಯಪಲ್ ಮುಂದಾಗಿದೆ.

ಪ್ರೊ ಸರಣಿಯಲ್ಲಿ ಐಫೋನ್ 14 Pro ಮತ್ತು ಐಫೋನ್ 14 Pro ಮ್ಯಾಕ್ಸ್ ಮಾದರಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ.

ಆದರೆ ಐಫೋನ್ 14 ಸಾಮಾನ್ಯ ಸಂಖ್ಯೆಯ ಬೇಡಿಕೆ ಹೊಂದಿದೆ. ಹೀಗಾಗಿ ಐಫೋನ್ 14 ಬದಲಿಗೆ, ಐಫೋನ್ 14 Pro ಮಾದರಿಗಳತ್ತ ಹೆಚ್ಚಿನ ಗಮನ ಹರಿಸಲು ಆ್ಯಪಲ್ ಮುಂದಾಗಿದ್ದು, ಕನಿಷ್ಠ ಐದು ಘಟಕಗಳಲ್ಲಿ ಉತ್ಪಾದನೆ ಏರಿಕೆಗೆ ಕ್ರಮ ಕೈಗೊಂಡಿದೆ ಎಂದು ವರದಿಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು