ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಂಬಂಧಿತ ವೈಶಿಷ್ಟ್ಯಗಳ ಜೊತೆ ಬರುತ್ತಿದೆ ಫೇಸ್‌ಬುಕ್ ಸ್ಮಾರ್ಟ್ ವಾಚ್

Last Updated 13 ಫೆಬ್ರುವರಿ 2021, 6:41 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಜಗತ್ತಿನ ಜನಪ್ರಿಯ ಜಾಲತಾಣ ಫೇಸ್‌ಬುಕ್ ಸಂಸ್ಥೆಯು ಸ್ಮಾರ್ಟ್ ವಾಚ್ ತಯಾರಿಸುತ್ತಿದ್ದು, ಇದರಲ್ಲಿ ಮೆಸೇಜ್ ಕಳುಹಿಸುವ ಜೊತೆಗೆ ಆರೋಗ್ಯ ಮತ್ತು ಫಿಟ್‌ನೆಸ್ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿರುತ್ತದೆ ಎಂದು ಶುಕ್ರವಾರ https://bit.ly/378YViU ವರದಿ ಮಾಡಿದೆ ಎಂದು ರಾಯಿಟರ್ಸ್ ತಿಳಿಸಿದೆ.

ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮುಂದಿನ ವರ್ಷ ಈ ಸಾಧನದ ಮಾರಾಟ ಆರಂಭಕ್ಕೆ ಯೋಜಿಸಿದೆ, ವರದಿಯ ಪ್ರಕಾರ, ಪ್ರಸ್ತುತ ಆಪಲ್ ಮತ್ತು ಹುವಾವೇ ಪ್ರಾಬಲ್ಯವಿರುವ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಫೇಸ್‌ಬುಕ್ ಸಾಧನದ ಪ್ರವೇಶ ಮಹತ್ವ ಪಡೆದುಕೊಂಡಿದೆ.

ಫೇಸ್‌ಬುಕ್‌ನ ಸ್ಮಾರ್ಟ್‌ವಾಚ್ ಸೆಲ್ಯುಲಾರ್ ಸಂಪರ್ಕದ ಮೂಲಕ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಅದರ ಸೇವೆಗಳ ಮೂಲಕ ಸಂದೇಶಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ. ಇದರ ಜೊತೆಗೆ, ಆರೋಗ್ಯ ಮತ್ತು ಫಿಟ್‌ನೆಸ್ ಕಂಪನಿಗಳಾದ ಪೆಲೋಟಾನ್ ಇಂಟರ್ಯಾಕ್ಟಿವ್‌ನಂತಹ ಸೇವೆಗಳು ಅಥವಾ ಹಾರ್ಡ್‌ವೇರ್‌ಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕ್ಯಾಲಿಫೋರ್ನಿಯಾ ಮೂಲದ ಫೇಸ್‌ಬುಕ್ ಇತ್ತೀಚಿನ ವರ್ಷಗಳಲ್ಲಿ ಹಾರ್ಡ್‌ವೇರ್ ಕ್ಷೇತ್ರಕ್ಕೆ ಕಾಲಿಡುತ್ತಿದೆ, ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಆಕ್ಯುಲಸ್ ಮತ್ತು ವಿಡಿಯೋ ಚಾಟಿಂಗ್ ಡಿವೈಸ್ ಪೋರ್ಟಲ್ ಸೇರಿದಂತೆ ಉತ್ಪನ್ನಗಳೊಂದಿಗೆ ಬಂದಿದೆ.

ಸ್ಮಾರ್ಟ್ ವಾಚ್ ತಯಾರಿಸುತ್ತಿರುವ ರಾಯಿಟರ್ಸ್ ಫೇಸ್‌ಬುಕ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT