ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

HTC Desire 22 Pro: ಜಾಗತಿಕ ಮಾರುಕಟ್ಟೆಗೆ ಮತ್ತೆ ಎಂಟ್ರಿ ಕೊಟ್ಟ ಎಚ್‌ಟಿಸಿ

ಅಕ್ಷರ ಗಾತ್ರ

ಬೆಂಗಳೂರು: ತೈವಾನ್ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಎಚ್‌ಟಿಸಿ, ಜಾಗತಿಕ ಟೆಕ್ ಮಾರುಕಟ್ಟೆಗೆ ಮತ್ತೆ ಲಗ್ಗೆ ಇರಿಸಿದೆ.

ಎಚ್‌ಟಿಸಿ ಡಿಸೈರ್ 22 ಪ್ರೊ ಬುಧವಾರ ಬಿಡುಗಡೆಯಾಗಿದ್ದು, ಜುಲೈ 1ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆಗಸ್ಟ್‌ ವೇಳೆಗೆ ಇಂಗ್ಲೆಂಡ್‌ನಲ್ಲಿ ದೊರೆಯಲಿದೆ ಎಂದು ಎಚ್‌ಟಿಸಿ ಹೇಳಿದೆ.

ಎಚ್‌ಟಿಸಿ ಡಿಸೈರ್ 22 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ 6.6 ಇಂಚಿನ ಫುಲ್‌ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಬೆಂಬಲ ಹಾಗೂ IP67 ರೇಟಿಂಗ್ ಹೊಂದಿದೆ.

ಹೈಬ್ರಿಡ್ ಡ್ಯುಯಲ್ ಸಿಮ್, ಸ್ಮಾರ್ಟ್‌ಫೋನ್ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದರಲ್ಲಿದೆ.

5G ಮೋಡೆಮ್ ಸಹಿತ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್, ಅಡ್ರೆನೊ 619 ಗ್ರಾಫಿಕ್ಸ್ ಬೆಂಬಲ, 8 GB RAM ಮತ್ತು 128 GB ಸ್ಟೋರೇಜ್ ಹಾಗೂ Android 12 ಓಎಸ್ ಬೆಂಬಲ ಹೊಂದಿದೆ.

ನೂತನ ಎಚ್‌ಟಿಸಿ ಡಿಸೈರ್ 22 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಹಾಗೂ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಗೋಲ್ಡ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯುವ ಹೊಸ ಎಚ್‌ಟಿಸಿ ಸ್ಮಾರ್ಟ್‌ಫೋನ್, ಭಾರತದಲ್ಲಿ ಲಭ್ಯತೆ ಮತ್ತು ಬೆಲೆ ವಿವರವನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT