ಬುಧವಾರ, ಆಗಸ್ಟ್ 10, 2022
25 °C

ಗ್ಯಾಜೆಟ್ ಮಾರುಕಟ್ಟೆಗೆ ಬಂತು ಹೊಸ ಐಕ್ಯೂ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಬ್ರ್ಯಾಂಡ್ ಐಕ್ಯೂ, ದೇಶದಲ್ಲಿ ನೂತನ ಐಕ್ಯೂ ನಿಯೋ 6 ಸರಣಿಯನ್ನು ಪರಿಚಯಿಸಿದೆ.

ನೂತನ ಐಕ್ಯೂ ನಿಯೋ 6 ಸ್ಮಾರ್ಟ್‌ಫೋನ್, 6.62 ಇಂಚಿನ ಫುಲ್‌ಎಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 870 ಪ್ರೊಸೆಸರ್ ಜತೆಗೆ ಅಡ್ರೆನೊ 650 ಗ್ರಾಫಿಕ್ಸ್ ಬೆಂಬಲ ಹೊಂದಿದೆ.

8 GB/12 GB RAM ಮತ್ತು 128 GB/256 GB ಸ್ಟೋರೇಜ್ ಬೆಂಬಲ ಹೊಂದಿದ್ದು, ಆಂಡ್ರಾಯ್ಡ್ 12 ಆಧಾರಿತ ಫನ್‌ಟಚ್ ಓಎಸ್ 12, 4700mAh ಬ್ಯಾಟರಿ ಹಾಗೂ 80w ಚಾರ್ಜಿಂಗ್ ಇದರಲ್ಲಿದೆ.

ಫೋಟೊಗ್ರಫಿ ಪ್ರಿಯರಿಗಾಗಿ ಹೊಸ ನಿಯೋ 6 ಸ್ಮಾರ್ಟ್‌ಫೋನ್‌ನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 12 ಮತ್ತು 2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಇದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.

ಅಮೆಜಾನ್ ಮತ್ತು ಐಕ್ಯೂ ಸ್ಟೋರ್ ಮೂಲಕ ನೂತನ ಸ್ಮಾರ್ಟ್‌ಫೋನ್ ಲಭ್ಯವಾಗಲಿದ್ದು, 8GB RAM + 128GB ಆವೃತ್ತಿಗೆ ₹29,999 ಹಾಗೂ 12GB RAM + 256GB ಮಾದರಿಗೆ ₹33,999 ದರ ನಿಗದಿಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು