ಶುಕ್ರವಾರ, ಜನವರಿ 27, 2023
20 °C

ಬಜೆಟ್ ದರದ ಸ್ಮಾರ್ಟ್‌ಫೋನ್ ಪರಿಚಯಿಸಿದ ಐಟೆಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

itel india

ಬೆಂಗಳೂರು: ದೇಶದ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಐಟೆಲ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಐಟೆಲ್ ‘ವಿಶನ್ 2ಎಸ್’ ಬಜೆಟ್ ದರದ ಸ್ಮಾರ್ಟ್‌ಫೋನ್, ₹6,999 ಕ್ಕೆ ದೊರೆಯಲಿದೆ. ಇದರಿಂದ ಬಜೆಟ್ ದರಕ್ಕೆ ಹೊಸ ಫೀಚರ್‌ಗಳಿರುವ ಫೋನ್ ಖರೀದಿಸಲು ಬಯಸುವವರಿಗೆ ಅನುಕೂಲವಾಗಲಿದೆ.

ಐಟೆಲ್ ‘ವಿಶನ್ 2ಎಸ್’ ತಾಂತ್ರಿಕ ವೈಶಿಷ್ಟ್ಯ

ನೂತನ ಐಟೆಲ್ ‘ವಿಶನ್ 2ಎಸ್’, 6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 2 GB RAM + 32 GB ಮೆಮೊರಿ ಹೊಂದಿದೆ.

ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ + VGA ಕ್ಯಾಮರಾ ಇದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ಪರ್ಪಲ್, ಬ್ಲೂ ಮತ್ತು ಡೀಪ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ನೂತನ ಫೋನ್ ದೊರೆಯಲಿದ್ದು, ಆಂಡ್ರಾಯ್ಡ್ 11 ಗೊ ಆವೃತ್ತಿ ಮೂಲಕ ಕಾರ್ಯನಿರ್ವಹಿಸುತ್ತದೆ. 5000mAh ಬ್ಯಾಟರಿ ಇದರಲ್ಲಿದ್ದು, ಹೆಚ್ಚಿನ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು