ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಯೊಫೋನ್ ಪ್ರೈಮಾ 2: ಹೊಸ 4ಜಿ ಫೋನ್ ಬಿಡುಗಡೆ

Published : 13 ಸೆಪ್ಟೆಂಬರ್ 2024, 13:28 IST
Last Updated : 13 ಸೆಪ್ಟೆಂಬರ್ 2024, 13:28 IST
ಫಾಲೋ ಮಾಡಿ
Comments

ಬೆಂಗಳೂರು: ಅತ್ಯದ್ಭುತ ವಿನ್ಯಾಸ ಮತ್ತು ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹೊಚ್ಚ ಹೊಸದಾದ ‘ಜಿಯೊಫೋನ್ ಪ್ರೈಮಾ 2‘ ಸ್ಮಾರ್ಟ್ ಫೀಚರ್ ಫೋನ್ ಬಿಡುಗಡೆಯಾಗಿದೆ.

ಕರ್ವ್ ವಿನ್ಯಾಸ, ಐಷಾರಾಮಿ ಲೆದರ್ ಫಿನಿಶಿಂಗ್ ಹೊಂದಿರುವ ಈ ಸ್ಮಾರ್ಟ್ ಫೀಚರ್ ಫೋನ್, ಜಿಯೊ ಆ್ಯಪ್‌ಗಳ ಜೊತೆಗೆ ಯೂಟ್ಯೂಬ್, ಫೇಸ್‌ಬುಕ್, ಗೂಗಲ್ ವಾಯ್ಸ್ ಅಸಿಸ್ಟೆಂಟ್ ಮತ್ತು ಇತರ ಜನಪ್ರಿಯ ಆ್ಯಪ್‌ಗಳನ್ನು ಬೆಂಬಲಿಸುತ್ತದೆ.

ಜಿಯೊ ಆ್ಯಪ್‌ಗಳಾದ ಜಿಯೊಟಿವಿ, ಜಿಯೊಸಾವನ್, ಜಿಯೊನ್ಯೂಸ್, ಜಿಯೊಸಿನಿಮಾ ಮುಂತಾದವುಗಳ ಬಳಕೆಯ ಜೊತೆಗೆ ಜಿಯೊ ಪೇ ಆ್ಯಪ್ ಮೂಲಕ ಯುಪಿಐ ಪಾವತಿಗೆ ಈ ಫೋನ್ ಅವಕಾಶ ಒದಗಿಸುತ್ತದೆ. ಜೊತೆಗೆ, ಜಿಯೊಚಾಟ್ ಮೂಲಕ ಗ್ರೂಪ್ ಚಾಟ್, ಧ್ವನಿ ಸಂದೇಶಗಳು, ಫೋಟೊ ಮತ್ತು ವಿಡಿಯೊ ಹಂಚಿಕೆ ಮುಂತಾದ ಸೌಲಭ್ಯಗಳು ಇದರಲ್ಲಿವೆ. ಇದರಲ್ಲಿ ಜಿಯೊಸ್ಟೋರ್ ಇದ್ದು, ಅದರಿಂದ ಬಳಕೆದಾರರು ತಮಗೆ ಅಗತ್ಯವಿರುವ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಪರ್ಶ-ಗ್ರಾಹ್ಯವಾದ ಕೀಪ್ಯಾಡ್ ಇದ್ದು, ಸುಗಮವಾದ ಬಳಕೆಗೆ ಮೃದುವಾದ ಪುಷ್ ಬಟನ್‌ಗಳಿವೆ. ಜೊತೆಗೆ, ಮೈಕ್ರೋಫೋನ್ ಚಿಹ್ನೆ ಇರುವ ದೊಡ್ಡದಾದ ನ್ಯಾವಿಗೇಶನ್ ಕೀ ಮೂಲಕ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಸುಲಭವಾಗಿ ಬಳಸಬಹುದು. ಇದು ಕಾಯ್ಒಎಸ್ (KaiOS) ಮೂಲಕ ಕಾರ್ಯಾಚರಿಸುತ್ತದೆ. ಇದರಲ್ಲಿ ಕ್ವಾಲಕ್ಕಂ ಪ್ರೊಸೆಸರ್ ಇದ್ದು, 512mb RAM ಮತ್ತು 4gb ಆಂತರಿಕ ಮೆಮೊರಿ ಇದೆ. 128ಜಿಬಿವರೆಗಿನ ಸಾಮರ್ಥ್ಯದ ಬಾಹ್ಯ ಎಸ್‌ಡಿ ಕಾರ್ಡ್‌ಗಳ ಮೂಲಕ ನಮಗೆ ಬೇಕಾದ ಫೈಲ್, ಹಾಡು, ವಿಡಿಯೊಗಳನ್ನು ಸೇವ್ ಮಾಡಿಕೊಳ್ಳಬಹುದು.

2.4 ಇಂಚಿನ ಎಲ್‌ಸಿಡಿ ಸ್ಕ್ರೀನ್, 2000mAh ಬ್ಯಾಟರಿ, ಸೆಲ್ಫಿ ಕ್ಯಾಮೆರಾ ಹಾಗೂ ಹಿಂಭಾಗದಲ್ಲಿ ಪ್ರಧಾನ ಕ್ಯಾಮೆರಾ ಲೆನ್ಸ್ ಹೊಂದಿದೆ. ಹಾಡುಗಳನ್ನು ಕೇಳಲು 3.5 ಮಿಮೀ ಹೆಡ್‌ಫೋನ್ ಜ್ಯಾಕ್ ಇದ್ದು, ಬ್ಲೂಟೂತ್ 5.0 ಹಾಗೂ ವೈಫೈ ಸಂಪರ್ಕವಿದ್ದು ಇಂಗ್ಲಿಷ್ ಮತ್ತು ಭಾರತದ 22 ಭಾಷೆಗಳನ್ನು ಈ ಫೋನ್ ಬೆಂಬಲಿಸುತ್ತದೆ.

ಜಿಯೊಫೋನ್‌ ಪ್ರೈಮಾ 2 ಫೋನಿನ ಬೆಲೆ ₹2799.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT