ಸೋಮವಾರ, ಸೆಪ್ಟೆಂಬರ್ 27, 2021
21 °C

ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ‘ಇನ್‌ 2ಬಿ’ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೊಮ್ಯಾಕ್ಸ್‌, ಕೈಗೆಟುಕುವ ದರದ ‘ಇನ್‌ 2ಬಿ’ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ʼಇನ್‌ʼ ಸರಣಿಯ ‘ಇನ್ ನೋಟ್ 1’ ಮತ್ತು ‘ಇನ್‌ 2ಬಿ’ ಫೋನ್‌ಗಳನ್ನು ಈ ಮೊದಲು ಪರಿಚಯಿಸಿತ್ತು.

ARM ಕಾರ್ಟೆಕ್ಸ್‌ A75 ಆಧಾರಿತ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿರುವ ಈ ಫೋನ್‌ ಕ್ಷಿಪ್ರ ಕಾರ್ಯಕ್ಷಮತೆಯನ್ನು ಹೊಂದಿದ್ದು, ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಲ್ಲಿ ಲಭ್ಯವಿದೆ.‌

6.52 ಇಂಚಿನ ಎಚ್‌ಡಿ ಡಿಸ್ಪ್ಲೇ, 5,000ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ, 13ಎಂಪಿ ಸಾಮಾನ್ಯ ಕ್ಯಾಮೆರಾ, 5ಎಂಪಿ ಫ್ರಂಟ್ ಕ್ಯಾಮೆರಾ ಫೀಚರ್ಸ್‌ಗಳನ್ನು ಹೊಂದಿವೆ.

4 ಜಿಬಿ ರ್‍ಯಾಮ್, 64 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ₹ 7,999 ಕ್ಕೆ ಲಭ್ಯವಿದೆ. 6 ಜಿಬಿ ರ್‍ಯಾಮ್‌ ಹಾಗೂ 64 ಜಿಬಿ ಸ್ಟೋರೇಜ್‌ನ ಸ್ಮಾರ್ಟ್‌ಫೋನ್‌ ₹ 8,999ಕ್ಕೆ ಸಿಗಲಿದೆ.

ಕಂಪೆನಿಯ ಅಧಿಕೃತ ವೆಬ್‌ಸೈಟ್‌ (micromaxinfo.com) ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಆಗಸ್ಟ್‌ 6 ರಿಂದ ಫೋನ್‌ ಅನ್ನು ಖರೀದಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು