ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಮ್ಯಾಕ್ಸ್‌ ಹೊಸ ಫೋನ್‌ 'ಇನ್‌ ನೋಟ್‌ 2': ಬೆಲೆ ₹13,490

Last Updated 30 ಜನವರಿ 2022, 6:04 IST
ಅಕ್ಷರ ಗಾತ್ರ

ಬೆಂಗಳೂರು: ದೇಶೀಯ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್‌ನ ಹೊಸ ಫೋನ್‌ 'ಇನ್‌ ನೋಟ್‌ 2' ಇಂದಿನಿಂದ ಖರೀದಿಗೆ ಸಿಗುತ್ತಿದೆ. ಚೀನಾದ ಸ್ಮಾರ್ಟ್‌ಫೋನ್‌ಗಳಿಗೆ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಹೊರತರುತ್ತಿರುವುದಾಗಿ ಮೈಕ್ರೋಮ್ಯಾಕ್ಸ್‌ ಹೇಳಿಕೊಂಡಿದೆ.

'ಇನ್ ಫಾರ್ ಇಂಡಿಯಾ' ಸ್ಲೋಗನ್ ಮೂಲಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಮೈಕ್ರೋಮ್ಯಾಕ್ಸ್‌ನ ನೋಟ್‌ ಮಾದರಿಯ ಫೋನ್‌ಗಳಲ್ಲಿ 'ಇನ್‌ ನೋಟ್‌ 2' ಎರಡನೇ ಫೋನ್‌ ಆಗಿದೆ. ಅಮೊಲೆಡ್‌ ಡಿಸ್‌ಪ್ಲೇ, ಗ್ಲಾಸ್‌ ಫಿನಿಶ್‌ ಹೊರ ಭಾಗ ಹಾಗೂ ಲಿಕ್ವಿಡ್‌ ಕೂಲಿಂಗ್‌ ತಂತ್ರಜ್ಞಾನ ಈ ಫೋನ್‌ನ ವಿಶೇಷ. ಪ್ರಸ್ತುತ 4ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಫೋನ್‌ ಲಭ್ಯವಿದೆ.

ಫೋನ್‌ ಅನ್‌ಲಾಕ್‌ ಮಾಡಲು ಬಲ ಬದಿಯಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಅಳವಡಿಸಲಾಗಿದೆ. 6.43 ಇಂಚು ಅಮೊಲೆಡ್‌ ಡಿಸ್‌ಪ್ಲೇ (ಫುಲ್‌ ಎಚ್‌ಡಿ+), ಲಿಕ್ವಿಡ್‌ ಕೂಲಿಂಗ್‌ ತಂತ್ರಜ್ಞಾನ ಒಳಗೊಂಡಿರುವ ಮೀಡಿಯಾಟೆಕ್‌ ಹೀಲಿಯೊ ಜಿ95 ಪ್ರೊಸೆಸರ್‌, 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಹಾಗೂ 30ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆಯಿಂದಾಗಿ 25 ನಿಮಿಷಗಳಲ್ಲಿ ಶೇಕಡ 50ರಷ್ಟು ಚಾರ್ಜ್‌ ಆಗುತ್ತದೆ.

ಫೋನ್‌ ಹಿಂಬದಿಯಲ್ಲಿ 48ಎಂಪಿ ಪ್ರೈಮರಿ ಸೆನ್ಸರ್‌, 5ಎಂಪಿ ಅಲ್ಟ್ರಾ ವೈಡ್‌ ಶೂಟರ್, 2ಎಂಪಿ ಮ್ಯಾಕ್ರೊ ಲೆನ್ಸ್‌ ಹಾಗೂ 2ಎಂಪಿ ಡೆಪ್ತ್‌ ಸೆನ್ಸರ್‌ ಸೇರಿ ನಾಲ್ಕು ಕ್ಯಾಮೆರಾಗಳಿವೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ.

ಇದು 4ಜಿ ಫೋನ್‌ ಆಗಿದ್ದು, 5ಗಿಗಾ ಹರ್ಟ್ಸ್‌ ವೈಫೈ ಸಂಪರ್ಕ ಸಾಧ್ಯವಾಗಿಸುತ್ತದೆ. 3ಇನ್‌ 1 ಸಿಮ್‌ ಸ್ಲಾಟ್‌ ಹಾಗೂ ಸ್ಟಾಕ್‌ ಆ್ಯಂಡ್ರಾಯ್ಡ್‌ (11) ಒಸ್‌, ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್‌ ಸುರಕ್ಷತೆ ಇದೆ.

ಮೈಕ್ರೋಮ್ಯಾಕ್ಸ್‌ ವೆಬ್‌ಸೈಟ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಫೋನ್‌ ಖರೀದಿಗೆ ಸಿಗುತ್ತಿದೆ. ಮೈಕ್ರೋಮ್ಯಾಕ್ಸ್‌ ವೆಬ್‌ಸೈಟ್‌ನಲ್ಲಿ ಈ ಫೋನ್‌ಗೆ ₹13,490 ಬೆಲೆ ನಿಗದಿಯಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ₹12,490ಕ್ಕೆ ಸಿಗುತ್ತಿದೆ. ಬ್ಲ್ಯಾಕ್‌ ಮತ್ತು ಓಕ್‌ (ಬ್ರೌನ್‌) ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT