ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟೊರೊಲಾ ಎಡ್ಜ್‌+ ಶೀಘ್ರ ಮಾರುಕಟ್ಟೆಗೆ

Last Updated 25 ಮೇ 2020, 19:30 IST
ಅಕ್ಷರ ಗಾತ್ರ

ಮೊಟೊರೊಲಾ ಕಂಪನಿ 5ಜಿ ಕಾರ್ಯಕ್ಷಮತೆ ಹಾಗೂ ಉತ್ತಮ ಡಿಸ್ಪ್ಲೇ ಹೊಂದಿರುವ ‘ಮೊಟೊರಾಲಾ ಎಡ್ಜ್‌+ ಎಂಬ ಸ್ಮಾರ್ಟ್‌ಫೋನ್‌ನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ವೇಗದ ಕಾರ್ಯಕ್ಷಮತೆ ಜತೆಗೆ, ಗುಣಮಟ್ಟದ ಫ್ರಂಟ್‌ ಮತ್ತು ಬ್ಯಾಕ್‌ ಕ್ಯಾಮೆರಾ, ದೀರ್ಘಕಾಲದವರೆಗೂ ಚಾರ್ಜ್‌ ಉಳಿಯವಂತಹ ಬ್ಯಾಟರಿ.. ಇವೆಲ್ಲ ಈ ಸ್ಮಾರ್ಟ್‌ ಫೋನ್‌ನ ವೈಶಿಷ್ಟ್ಯಗಳು.

ತಾಂತ್ರಿಕ ವಿವರ:ಮೊಟೊರೊಲಾ ಎಡ್ಜ್+ ಎಂಡ್‍ಲೆಸ್ ಎಡ್ಜ್ ಅಮೊ ಎಲ್ ಇ ಡಿ ಡಿಸ್ಪ್ಲೆ ಇದೆ. 6.7 ಇಂಚ್ ಎಚ್ ಡಿ+ ಪರದೆ, 90Hz ರಿಫ್ರೆಶ್ ರೇಟ್ ನೊಂದಿಗೆ,HDR10+ ಸಪೋರ್ಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 Soc ನಿಂದ ಚಾಲಿತ, ಅಡ್ರಿನೊ 650 ಜಿಪಿಯು, 12 ಜಿಪಿ ಎಲ್ ಪಿಡಿಡಿಆರ್ 5 ರ‍್ಯಾಮ್‌ , 256 ಜಿಬಿಯಷ್ಟು ಯುಎಫ್ಎಸ್ 3.0 ಆಂತರಿಕ ಸ್ಟೋರೇಜ್ ಇದೆ.

ಆಂಡ್ರಾಯ್ಡ್ 10 ಒಎಸ್ ಇದೆ. 2 ಆಂಡ್ರಾಯ್ಡ್ ಒಎಸ್ ಅಪ್ಡೇಟ್‌ಗಳು ಲಭ್ಯವಿವೆ. 5000 ಎಂಎಹೆಚ್ ಬ್ಯಾಟರಿ, ಟರ್ಬೊಪವರ್ ವೈಡ್‌ ಚಾರ್ಜಿಂಗ್‌ ಹಾಗೂ 15W ನ ವೈರ್ಲೆಸ್ ಪವರ್‌ ಚಾರ್ಜಿಂಗ್ ಲಭ್ಯವಿರಲಿದೆ.

ಬೆಲೆ ಮತ್ತು ಲಭ್ಯತೆ:ಮೊಟೊರೊಲಾ ಎಡ್ಜ್+ ಸ್ಮೋಕಿ ಸಂಗ್ರಿಯಾ ಮತ್ತು ಥಂಡರ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಹಾಗೂ 12ಜಿಬಿ ರ‍್ಯಾಮ್‌ ಮತ್ತು 256 ಜಿಬಿ ಮೆಮೊರಿಗಳಲ್ಲಿ ಲಭ್ಯವಿದೆ. ‘ಮೊಟೊರೊಲಾ ಎಡ್ಜ್+‘, ಮೇ 26ರಿಂದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

ಈ ಸ್ಮಾರ್ಟ್‌ಫೋನ್ ಬೆಲೆ: ₹74,999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT