ಬುಧವಾರ, ಜನವರಿ 29, 2020
30 °C

ಹೊಸ ಬಜೆಟ್ ಸ್ಮಾರ್ಟ್‌ಫೋನ್ 'Nokia 2.3'; ಎರಡು ದಿನ ಉಳಿಯುತ್ತೆ ಬ್ಯಾಟರಿ ಚಾರ್ಜ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಹೊಸ ನೋಕಿಯಾ 2.3 ಸ್ಮಾರ್ಟ್‌ಫೋನ್‌

ನೋಕಿಯಾದ ಹೊಸ ಬಜೆಟ್‌ ಸ್ಮಾರ್ಟ್‌ಫೋನ್‌ ಗುರುವಾರ ಬಿಡುಗಡೆಯಾಗಿದೆ. ಈಜಿಪ್ಟ್‌ನ ಕೈರೋದಲ್ಲಿ ಎಚ್‌ಎಂಡಿ ಗ್ಲೋಬಲ್‌ನ ಹೊಸ 'ನೋಕಿಯಾ 2.3' ಬಿಡುಗಡೆಯಾಗಿದ್ದು, ನೋಕಿಯಾ 8.2 ಮತ್ತು ನೋಕಿಯಾ 5.2 ಸ್ಮಾರ್ಟ್‌ಫೋನ್‌ ಅನಾವರಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. 

ಡಿಸೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ನೋಕಿಯಾ 2.3 ಖರೀದಿಗೆ ಲಭ್ಯವಾಗಲಿದೆ. ಸಿಯಾನ್‌ ಗ್ರೀನ್‌, ಸ್ಯಾಂಡ್ ಹಾಗೂ ಚಾರ್‌ಕೋಲ್‌; ಮೂರು ಬಣ್ಣಗಳಲ್ಲಿ ಲಭ್ಯವಿರಲಿದ್ದು, ಬೆಲೆ 109 ಯೂರೊ (ಸುಮಾರು ₹8,700) ನಿಗದಿಯಾಗಿದೆ. 

ಅಲ್ಯೂಮಿನಿಯಂ ಹೊರ ಕವಚ, 6.2 ಇಂಚು ಎಚ್‌ಡಿ ಡಿಸ್‌ಪ್ಲೇ, ಮೀಡಿಯಾಟೆಕ್ ಹೀಲಿಯೊ ಎ22 ಚಿಪ್‌ಸೆಟ್‌, 2 ಜಿಬಿ ರ್‍ಯಾಮ್‌ ಹಾಗೂ 32 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ಗರಿಷ್ಠ 400 ಜಿಬಿ ಸಂಗ್ರಹಿಸಲು ಅವಕಾಶವಿದೆ. 

ಡ್ಯೂಯೆಲ್‌ ಕ್ಯಾಮೆರಾ: ನೋಕಿಯಾ 2.3 ಫೋನ್‌ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ. 13 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಮತ್ತು ಎಲ್‌ಇಡಿ ಫ್ಲಾಷ್‌ ಇದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ. 

ಎರಡು ಸಿಮ್‌ಗಳನ್ನು ಬಳಸಲು ಅವಕಾಶವಿದ್ದು, 4ಜಿ ವೋಲ್ಟ್‌ ಸಪೋರ್ಟ್‌ ಇದೆ. ಎಫ್‌ಎಂ ರೇಡಿಯೊ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌, ಬ್ಲೂಟೂತ್ 5.0 ಹೊಂದಿದೆ. 4000 ಎಂಎಎಚ್‌ ಬ್ಯಾಟರಿ ಒಮ್ಮೆ ಚಾರ್ಜ್‌ ಮಾಡಿದರೆ, ಆ್ಯಂಡ್ರಾಯ್ಡ್‌ 9ರ 'ಅಡಾಪ್ಟೀವ್‌ ಬ್ಯಾಟರಿ' ಗುಣದಿಂದಾಗಿ ಎರಡು ದಿನಗಳ ಬಳಕೆಗೆ ಚಾರ್ಜ್‌ ಉಳಿಯುತ್ತದೆ. ಈ ಬ್ಯಾಟರಿ 5 ವ್ಯಾಟ್‌ ಚಾರ್ಜಿಂಗ್‌ ಸಪೋರ್ಟ್‌ ಹೊಂದಿದೆ. 

ಆ್ಯಂಡ್ರಾಯ್ಡ್‌ ಒನ್‌ ಪ್ಲಾಟ್‌ಫಾರ್ಮ್‌ ಒಳಗೊಂಡ ಸ್ಮಾರ್ಟ್‌ಫೋನ್‌ 'ಆ್ಯಂಡ್ರಾಯ್ಡ್‌ 9 ಪೈ ಔಟ್‌–ಆಫ್‌–ದಿ–ಬಾಕ್ಸ್‌' ಒಎಸ್‌ನೊಂದಿದೆ ಬರುತ್ತಿದ್ದು, ಆ್ಯಂಡ್ರಾಯ್ಡ್‌ 10 ಅಪ್‌ಡೇಟ್‌ಗೆ ಸಿದ್ಧವಿರುತ್ತದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು