ಗುರುವಾರ , ಸೆಪ್ಟೆಂಬರ್ 23, 2021
23 °C

Nokia 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Nokia India

ಬೆಂಗಳೂರು: ಬೇಸಿಕ್ ಮತ್ತು ಫೀಚರ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದ್ದ ನೋಕಿಯಾ, ದೇಶದಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಿದೆ.

ಎಚ್‌ಎಂಡಿ ಗ್ಲೋಬಲ್ ಸಮೂಹದ ನೋಕಿಯಾ, 110 4G ಎಂಬ ಫೋನ್ ಪರಿಚಯಿಸಿದ್ದು, ಎಚ್‌ಡಿ ವಾಯ್ಸ್ ಕಾಲಿಂಗ್ ಸೌಲಭ್ಯ ಹೊಂದಿದೆ.

ನೂತನ ನೋಕಿಯಾ 110 4G ಫೋನ್‌ನಲ್ಲಿ ಎಫ್‌ಎಂ ರೇಡಿಯೊ, 13 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಜತೆಗೆ 3.5mm ಆಡಿಯೋ ಜ್ಯಾಕ್, 32 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ ಅವಕಾಶ ಹೊಂದಿದೆ.

ನೋಕಿಯಾ 110 4G

ಹೊಸ ನೋಕಿಯಾ 110 4G ಫೀಚರ್ ಫೋನ್, ಹಳದಿ, ತಿಳಿ ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಜುಲೈ 24ರಿಂದ ನೋಕಿಯಾ ಡಾಟ್ ಕಾಂ ಮತ್ತು ಅಮೆಜಾನ್ ಡಾನ್ ಇನ್ ಮೂಲಕ ದೊರೆಯಲಿದೆ. ದೇಶದಲ್ಲಿ ಹೊಸ ನೋಕಿಯಾ ಫೋನ್ ಬೆಲೆ ₹2,799 ದರ ಹೊಂದಿದೆ.

1.8 ಇಂಚಿನ QVGA ಡಿಸ್‌ಪ್ಲೇ, 1,020mAh ಬ್ಯಾಟರಿ ನೋಕಿಯಾ 110 4G ಫೋನ್‌ನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು