ಮಂಗಳವಾರ, ಅಕ್ಟೋಬರ್ 26, 2021
28 °C

OnePlus Offer: ಸ್ಮಾರ್ಟ್‌ಫೋನ್, ಟಿವಿ ಖರೀದಿಗೆ ದೀಪಾವಳಿ ವಿಶೇಷ ಕೊಡುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

OnePlus Offer sale

ಬೆಂಗಳೂರು: ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್, ಗ್ಯಾಜೆಟ್ ಕಂಪನಿಗಳು ವಿಶೇಷ ಮಾರಾಟ ಆಯೋಜಿಸುತ್ತಿವೆ. ಒನ್‌ಪ್ಲಸ್ ದಿವಾಲಿ ಸೇಲ್ ಆರಂಭವಾಗಿದ್ದು, ಆಕರ್ಷಕ ದರ ಕಡಿತ ಪ್ರಕಟಿಸಿದೆ.

ವಿವಿಧ ಆವೃತ್ತಿ ಮತ್ತು ಮಾದರಿಗಳ ಟಿವಿ ಮತ್ತು ಸ್ಮಾರ್ಟ್‌ಫೋನ್ ಮೇಲೆ ಒನ್‌ಪ್ಲಸ್ ದೀಪಾವಳಿ ಕೊಡುಗೆ ಲಭ್ಯವಿದೆ. ಜತೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೂಲಕವೂ ಒನ್‌ಪ್ಲಸ್ ಆಫರ್ ಸೇಲ್ ಪ್ರಯೋಜನ ಪಡೆಯಬಹುದು.

ಒನ್‌ಪ್ಲಸ್ 9 ಸರಣಿಯ ಸ್ಮಾರ್ಟ್‌ಫೋನ್ ಮೇಲೆ ₹4,000 ವರೆಗೆ ಡಿಸ್ಕೌಂಟ್ ಲಭ್ಯವಿದೆ. ಒನ್‌ಪ್ಲಸ್ 9R ಮತ್ತು ಒನ್‌ಪ್ಲಸ್ 9 ಖರೀದಿಗೆ ₹3,000 ಡಿಸ್ಕೌಂಟ್ ಪ್ರಕಟಿಸಲಾಗಿದೆ.

ಒನ್‌ಪ್ಲಸ್ 9 ಪ್ರೊ ಖರೀದಿಗೆ ₹4,000 ಡಿಸ್ಕೌಂಟ್ ಇದೆ. ಜತೆಗೆ ಅಮೆಜಾನ್ ಮೂಲಕ ಖರೀದಿಸಿದರೆ ಎಚ್‌ಡಿಎಫ್‌ಸಿ ಕಾರ್ಡ್ ಬಳಕೆಗೆ ₹7,000 ವರೆಗೆ ಡಿಸ್ಕೌಂಟ್ ಮತ್ತು ಒನ್‌ಪ್ಲಸ್.ಇನ್ ಮೂಲಕ ಖರೀದಿಗೆ ಎಸ್‌ಬಿಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಕೊಡುಗೆ ಪ್ರಯೋಜನ ಪಡೆಯಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು