ಗುರುವಾರ , ಮಾರ್ಚ್ 23, 2023
30 °C

OnePlus Nord 2: ದೇಶದ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿದೆ ಒನ್‌ಪ್ಲಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

OnePlus India Screengrab

ಬೆಂಗಳೂರು: ಒನ್‌ಪ್ಲಸ್ ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಮುಂದಾಗಿದೆ.

ಒನ್‌ಪ್ಲಸ್ ನಾರ್ಡ್ ಸರಣಿಯಲ್ಲಿ ಹೊಸ ನಾರ್ಡ್-2 5G ಸ್ಮಾರ್ಟ್‌ಫೋನ್ ಕುರಿತು ಕಂಪನಿ ಘೋಷಿಸಿದ್ದು, ಅಮೆಜಾನ್ ಮೂಲಕ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಿದೆ.

ನೂತನ ಒನ್‌ಪ್ಲಸ್ ನಾರ್ಡ್-2 5G ಫೋನ್, ಮೀಡಿಯಾಟೆಕ್ ಪ್ರೊಸೆಸರ್ ಸಹಿತ ಬರುತ್ತಿದೆ ಎನ್ನಲಾಗಿದೆ.

ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಪ್ರಕಟಿಸಲಾಗಿದೆ. ಆದರೆ ಹೊಸ ಒನ್‌ಪ್ಲಸ್ ನಾರ್ಡ್-2 5G ಫೋನ್ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ಜುಲೈ 26 ಮತ್ತು 27ರಂದು ಅಮೆಜಾನ್ ಪ್ರೈಮ್ ಡೇ ವಿಶೇಷ ಆಫರ್ ಸೇಲ್ ಅನ್ನು ದೇಶದಲ್ಲಿ ನಡೆಸುವ ಸಾಧ್ಯತೆಯಿದೆ. ಅದೇ ಸಂದರ್ಭದಲ್ಲಿ ಹೊಸ ಒನ್‌ಪ್ಲಸ್ ಫೋನ್ ಖರೀದಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು