ಕೃತಕ ಬುದ್ಧಿಮತ್ತೆ ದೈತ್ಯ ಒಪನ್ಎಐ (OpenAI), ‘ಡೀಪ್ ರಿಸರ್ಚ್’ (Deep Research) ಮತ್ತೊಂದು ಎಐ ಟೂಲ್ ಅನ್ನು ಭಾನುವಾರ ಬಿಡುಗಡೆಗೊಳಿಸಿದೆ. ಇದು ಕಠಿಣ ವಿಷಯಗಳ ಬಗ್ಗೆ ಬಹುಸ್ತರದ ಸಂಶೋಧನಾ ವರದಿಯನ್ನು ತಯಾರಿಸಿ ಕೊಡುತ್ತದೆ ಎಂದು ಕಂಪನಿ ಹೇಳಿದೆ.

‘ಚಾಟ್ ಜಿಪಿಟಿ’ಗೆ ಚೀನಾದ ‘ಡೀಪ್ಸೀಕ್’ ಭಾರಿ ಸ್ಪರ್ಧೆ ಒಡ್ಡಿದ ಬೆನ್ನಲ್ಲೇ ಒಪನ್ ಎಐಯಿಂದ ಈ ಘೋಷಣೆ ಹೊರಬಿದ್ದಿದೆ.
.ಓಪನ್ಎಐನ ಮಾಜಿ ಉದ್ಯೋಗಿ, ಭಾರತೀಯ ಮೂಲದ ಸುಚಿರ್ ಬಾಲಾಜಿ ಆತ್ಮಹತ್ಯೆ.
ಮುಂಬರುವ OpenAI o3 ಆವೃತ್ತಿಯಲ್ಲಿ ಇದು ಲಭ್ಯವಾಗಲಿದ್ದು, ದತ್ತಾಂಶ ವಿಶ್ಲೇಷಣೆ ಹಾಗೂ ವೆಬ್ ಬ್ರೌಸಿಂಗ್ಗೆ ಇದು ಉಪಯೋಗವಾಗಲಿದೆ ಎಂದು ಒಪನ್ಎಐ ಹೇಳಿದೆ. ಬಳಕೆದಾರರು ಒಪನ್ಎಐನ ಚಾಟ್ ಬಾಕ್ಸ್ ಚಾಟ್ ಜಿಪಿಟಿ ಮೂಲಕ ಇದನ್ನು ಬಳಕೆ ಮಾಡಬಹುದು. ಚಾಟ್ ಜಿಪಿಟಿಯಲ್ಲಿ ಬೇಕಾದ ಮಾಹಿತಿ ಬಗ್ಗೆ ಕಮಾಂಡ್ ನೀಡಿದರೆ, ಆನ್ಲೈನ್ನಲ್ಲಿ ಬರಹ, ಚಿತ್ರ ಹಾಗೂ ಪಿಡಿಎಫ್ ರೂಪದಲ್ಲಿ ಲಭ್ಯವಿರುವ ಹಲವು ಮಾಹಿತಿಗಳನ್ನು ತಡಕಾಡಿ, ಸೋಸಿ ಸಮಗ್ರ ವರದಿಯನ್ನು ತಯಾರಿಸಿ ನಿಮ್ಮ ಮುಂದೆ ಇಡುತ್ತದೆ ಎಂದು ಒಪನ್ಎಐ ಹೇಳಿದೆ.

ಮಾನವರು ಗಂಟೆಗಟ್ಟಲೆ ವ್ಯಯಿಸಿ ಮಾಡುವ ಕೆಲಸವನ್ನು ಇದು ಕೆಲವೇ ನಿಮಿಷಗಳಲ್ಲೇ ಮಾಡಲಿದೆ ಎಂದು ಅದು ಹೇಳಿದೆ.
.Artificial Intelligence: ಚಾಟ್ ಜಿಪಿಟಿ vs ಗೂಗಲ್ ಬಾರ್ಡ್.
ಇದು ಆರಂಭಿಕ ಹಂತದಲ್ಲಿ ಇದ್ದು, ಕೆಲವೊಂದು ಮಿತಿಗಳೂ ಇವೆ. ಸದ್ಯಕ್ಕೆ ಇದು ನೈಜ ಹಾಗೂ ಅವಿಶ್ವಾಸಾರ್ಹ ಮಾಹಿತಿಯನ್ನು ಪ್ರತ್ಯೇಕಿಸಲು ಇದು ವಿಫಲವಾಗುತ್ತಿದೆ. ವಿಶ್ವಾಸಾರ್ಹ ಮಾಪನಾಂಕ ನಿರ್ಣಯದಲ್ಲಿ ದೌರ್ಬಲ್ಯ ತೋರಿಸುತ್ತದೆ ಎಂದು ಒಪನ್ ಎಐ ಹೇಳಿದೆ.

ಚಾಟ್ ಜಿಪಿಟಿಯ ವೆಬ್ ಆವೃತ್ತಿಯಲ್ಲಿ ಇದು ಭಾನುವಾರದಿಂದಲೇ ಲಭ್ಯವಾಗಿದೆ. ಮೊಬೈಲ್ ಹಾಗೂ ಆ್ಯಪ್ ಆವೃತ್ತಿಯಲ್ಲಿ ಫೆಬ್ರುವರಿ ಅಂತ್ಯದೊಳಗಾಗಿ ಸಿಗಲಿದೆ ಎಂದು ಮಾಹಿತಿ ನೀಡಿದೆ.

ಡೀಪ್ ರಿಸರ್ಚ್ ಈ ವರ್ಷದಲ್ಲಿ ಒಪನ್ಎಐ ಬಿಡುಗಡೆ ಮಾಡಿದ ಎರಡನೇ ಎಐ ಟೂಲ್. ಈ ಹಿಂದೆ ಟುಡು ಲಿಸ್ಟ್ ತಯಾರಿಸಲು ಹಾಗೂ ರಜೆ ಯೋಜನೆಗೆ ಸಹಾಯ ಮಾಡುವ ‘ಆಪರೇಟರ್’ ಟೂಲ್ ಅನ್ನು ಒಪನ್ಎಐ ಪರಿಚಯಿಸಿತ್ತು.
.ಮೈಕ್ರೊಸಾಫ್ಟ್ ಕಂಪನಿ ಸೇರಿದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್ಮನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.