ಸೋಮವಾರ, ಅಕ್ಟೋಬರ್ 18, 2021
25 °C

Oppo: ದೇಶದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Oppo India

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಒಪ್ಪೊ, ಎರಡು ಮಾದರಿಗಳ ಬೆಲೆಯನ್ನು ಇಳಿಕೆ ಮಾಡಿದೆ.

ಒಪ್ಪೊ A54 ಮತ್ತು ಒಪ್ಪೊ F19 ಬೆಲೆಯಲ್ಲಿ ಸುಮಾರು ₹1,000 ದಷ್ಟು ಏರಿಕೆಯಾಗಿದೆ.

ಈಗಾಗಲೇ ಶಿಯೋಮಿ ಮತ್ತು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಏರಿಕೆಯಾಗಿರುವ ಬೆನ್ನಲ್ಲೇ, ಒಪ್ಪೊ ಕೂಡ ಬೆಲೆ ಏರಿಕೆ ಮಾಡಿದೆ.

ಒಪ್ಪೊ ಪರಿಷ್ಕೃತ ದರ

ಒಪ್ಪೊ A54 ಸ್ಮಾರ್ಟ್‌ಫೋನ್, 4 GB + 64 GB ಮಾದರಿಗೆ ₹13,990 ಬದಲಿಗೆ, ಬೆಲೆ ಪರಿಷ್ಕರಣೆ ಬಳಿಕ ₹14,990 ದರಕ್ಕೆ ದೊರೆಯುತ್ತಿದೆ.

ಒಪ್ಪೊ ‌F19 ಸ್ಮಾರ್ಟ್‌ಫೋನ್ ₹18,990 ಬದಲಿಗೆ, ದರ ಹೆಚ್ಚಳ ಬಳಿಕ ₹19,990ಕ್ಕೆ ಲಭ್ಯವಾಗುತ್ತಿದೆ.

ಬಿಡಿಭಾಗಗಳ ಲಭ್ಯತೆ ಮತ್ತು ಪೂರೈಕೆಗೆ ಅನುಗುಣವಾಗಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಸ್ಮಾರ್ಟ್‌ಫೋನ್ ಕಂಪನಿಗಳು ಕಾರಣ ನೀಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು