ಶುಕ್ರವಾರ, ಜನವರಿ 27, 2023
26 °C

Oppo F19: ದೇಶದ ಮಾರುಕಟ್ಟೆಗೆ ತ್ರಿವಳಿ ಕ್ಯಾಮರಾ ಸಹಿತ ಒಪ್ಪೊ ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒಪ್ಪೊ ಹೊಸ ಮಾದರಿ ಬಿಡುಗಡೆಯಾಗಿದೆ. ಎಫ್ ಸರಣಿಯಲ್ಲಿ ನೂತನ ಎಫ್19 ಪರಿಚಯಿಸಲ್ಪಟ್ಟಿದ್ದು, ಅತ್ಯಂತ ತೆಳುವಾದ ವಿನ್ಯಾಸ ಹೊಂದಿದೆ.

ಒಪ್ಪೊ ಕಳೆದ ತಿಂಗಳು ಎಫ್ ಸರಣಿಯಲ್ಲಿ ಎಫ್19 ಪ್ರೊ ಮತ್ತು ಎಫ್19 ಪ್ರೊ+ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು.

ಹೊಸ ಒಪ್ಪೊ ಎಫ್19 ಸ್ಮಾರ್ಟ್‌ಫೋನ್, 33W ಫ್ಲ್ಯಾಶ್ ಚಾರ್ಜ್ ಮತ್ತು 5000mAh ಬ್ಯಾಟರಿ ಬೆಂಬಲ ಹೊಂದಿದೆ. ಅಲ್ಲದೆ, ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಹೊಂದಿದೆ.

ಒಪ್ಪೊ F19 ವಿಶೇಷತೆ

ಡಿಸ್‌ಪ್ಲೇ: 6.4 ಇಂಚು

ಕ್ಯಾಮರಾ: 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ 2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ

ಸೆಲ್ಫಿ: 16 ಮೆಗಾಪಿಕ್ಸೆಲ್ ಪಂಚ್ ಹೋಲ್ ಡಿಸ್ಪ್ಲೇ ಕ್ಯಾಮರಾ.

ಬೆಲೆ ಮತ್ತು ಲಭ್ಯತೆ

ಹೊಸ ಒಪ್ಪೊ F19 ಸ್ಮಾರ್ಟ್‌ಫೋನ್, 8GB RAM ಮತ್ತು128GB ಸ್ಟೋರೇಜ್ ಆಯ್ಕೆ ಹೊಂದಿದ್ದು, ₹18,990 ದರ ಹೊಂದಿದೆ. ಏಪ್ರಿಲ್ 9ರಿಂದ ಮಾರುಕಟ್ಟೆಯಲ್ಲಿ ನೂತನ ಫೋನ್ ಲಭ್ಯವಾಗಲಿದೆ. ಪ್ರಿಸಂ ಬ್ಲ್ಯಾಕ್ ಮತ್ತು ಮಿಡ್‌ನೈಟ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಹೊಸ ಒಪ್ಪೊ F19 ಫೋನ್ ದೊರೆಯುತ್ತದೆ ಎಂದು ಕಂಪನಿ ಹೇಳಿದೆ.

ಎಚ್‌ಡಿಎಫ್‌ಸಿ ಕೊಡುಗೆ

ನೂತನ ಒಪ್ಪೊ F19 ಫೋನ್ ಖರೀದಿಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದರೆ, ₹1,500 ವರೆಗೆ ಡಿಸ್ಕೌಂಟ್ ದೊರೆಯಲಿದೆ. ಅಲ್ಲದೆ, ಮೊಬೈಲ್ ಪ್ರೊಟೆಕ್ಷನ್ ಪ್ಲ್ಯಾನ್ ₹1ಕ್ಕೆ ದೊರೆಯಲಿದೆ. ಈಗಾಗಲೇ ಒಪ್ಪೊ ಫೋನ್ ಹೊಂದಿರುವವರು, ಎಕ್ಸ್‌ಚೇಂಜ್ ಮೂಲಕ ಖರೀದಿಸಿದರೆ ₹1,000 ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು