ಭಾನುವಾರ, ಆಗಸ್ಟ್ 1, 2021
26 °C

ಶವೋಮಿ ರೆಡ್‌ಮಿ ಫೋನ್‌ಗಳಲ್ಲಿ ದತ್ತಾಂಶ ಸುರಕ್ಷಿತವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ನಾಲ್ಕು ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಶವೋಮಿ (Xiaomi) ತನ್ನ ರೆಡ್‌ಮಿ ಸರಣಿಯ ಫೋನ್‌ಗಳಲ್ಲಿ ಬಳಕೆದಾರರ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸುತ್ತಿದೆ ಎಂದು ಫೋರ್ಬ್ಸ್ ಮ್ಯಾಗಜಿನ್ ವರದಿ ಪ್ರಕಟಿಸಿದೆ.

ಸೈಬರ್ ಭದ್ರತಾ ತಜ್ಞ ಗೇಬ್ರಿಯಲ್ ಸಿರ್ಲಿಗ್ ಅವರು ಇತ್ತೀಚೆಗೆ ರೆಡ್‌ಮಿ ನೋಟ್ 8 ಖರೀದಿಸಿದ್ದು, ಅವರು ತಮ್ಮ ಫೋನ್ ಬ್ರೌಸರ್ ಮೂಲಕ ಭೇಟಿ ಕೊಟ್ಟ ಪ್ರತಿಯೊಂದು ವೆಬ್ ತಾಣಗಳ ಮಾಹಿತಿಯನ್ನೂ ಅದು ದಾಖಲಿಸಿಕೊಳ್ಳುತ್ತಿತ್ತು ಎಂಬ ಹೇಳಿಕೆಯನ್ನು ಆಧರಿಸಿ ಈ ವಿಶೇಷ ವರದಿ ಪ್ರಕಟವಾಗಿತ್ತು.

ಖಾಸಗಿಯಾಗಿ ಇಂಟರ್ನೆಟ್ ಜಾಲಾಡುವ ವ್ಯವಸ್ಥೆಯಾದ ‘ಇನ್‌ಕಾಗ್ನಿಟೋ’ ಮೋಡ್‌ನಲ್ಲಿ ಕೂಡ ತಾನು ಏನನ್ನು ನೋಡಿದ್ದೇನೋ ಅವೆಲ್ಲವನ್ನೂ ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದರು. ಸಿಂಗಪುರ ಮತ್ತು ರಷ್ಯಾದಲ್ಲಿ ಅಲಿಬಾಬಾ ಮಾಲೀಕತ್ವದ ರಿಮೋಟ್ ಸರ್ವರ್‌ಗಳಿಗೆ ಈ ಮಾಹಿತಿಯನ್ನು ರವಾನಿಸಲಾಗುತ್ತಿತ್ತು ಮತ್ತು ಈ ಡೊಮೇನ್ ಹೆಸರುಗಳನ್ನು ಚೀನಾದ ಬೀಜಿಂಗ್‌ನಲ್ಲಿ ಹೋಸ್ಟ್ ಮಾಡಲಾಗಿರುವುದರಿಂದ, ದತ್ತಾಂಶವು ಅಲ್ಲಿಗೆ ರವಾನೆಯಾಗುತ್ತಿದೆ ಎಂದು ಈ ವರದಿ ತಿಳಿಸಿದೆ.

ಆದರೆ, ಈ ಬಗ್ಗೆ ಶವೋಮಿ ಸ್ಪಷ್ಟನೆ ನೀಡಿ ಈ ವರದಿಯನ್ನು ನಿರಾಕರಿಸಿದೆ. ತಾನು ಸ್ಥಳೀಯ ಕಾನೂನುಗಳನ್ನು ಪಾಲಿಸುತ್ತಿದ್ದು, ಬಳಕೆದಾರರ ದತ್ತಾಂಶ, ಖಾಸಗಿ ಮಾಹಿತಿಯು ಸುರಕ್ಷಿತವಾಗಿದೆ ಎಂದು ಅದು ಹೇಳಿದೆಯಲ್ಲದೆ, ತಮ್ಮ ಗೌಪ್ಯತಾ ನೀತಿಯಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು