ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Realme | ರಿಯಲ್‌ಮಿಯಿಂದ 12ಪ್ರೊ ಸಿರೀಸ್‌ನ ಸ್ಮಾರ್ಟ್‌ಫೋನ್‌ಗಳು: ಇಲ್ಲಿದೆ ವಿವರ

Published : 30 ಜನವರಿ 2024, 15:23 IST
Last Updated : 30 ಜನವರಿ 2024, 15:23 IST
ಫಾಲೋ ಮಾಡಿ
Comments

ಬೆಂಗಳೂರು: ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‌ಮಿ ತನ್ನ 12 ಪ್ರೊ 5ಜಿ ಸಿರೀಸ್‌ನ ಮೊಬೈಲ್‌ ಫೋನ್‌ಗಳನ್ನು ಪರಿಚಯಿಸಿದೆ. 12 ಪ್ರೊ ಹಾಗೂ 12 ಪ್ರೊ + ಎನ್ನುವ ಎರಡು ಮಾದರಿಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಉಭಯ ಮಾದರಿಯ ಫೋನ್‌ಗಳಿಗೆ ಹೆಚ್ಚು ಕಡಿಮೆ ಸಾಮ್ಯತೆ ಇದ್ದು, ಪ್ರೊಸೆಸರ್‌ ಹಾಗೂ ಕ್ಯಾಮೆರಾ ಹಾರ್ಡ್‌ವೇರ್‌ನಲ್ಲಿ ವ್ಯತ್ಯಾಸವಿದೆ.

6.7 ಇಂಚಿನ ಫುಲ್ ಎಚ್‌.ಡಿ (2412*1080) ಡಿಸ್ಲ್ಪೆ. AMOLED ಸ್ಕ್ರೀನ್‌, 360 Hz ಟಚ್‌ ಸಾಂಪ್ಲಿಂಗ್‌ ರೇಟ್‌, ಇನ್‌ ಡಿಸ್ಪ್ಲೆ ಫಿಂಗರ್ ಪ್ರಿಂಟ್‌, ಡ್ಯುಯಲ್ ಸಿಮ್ ಹಾಗೂ ಸಿ–ಟೈಪ್ ಚಾರ್ಜರ್‌, ಆ್ಯಂಡ್ರಾಯ್ಡ್ 14, 5000 mAh ಬ್ಯಾಟರಿ, 67W ಚಾರ್ಜರ್‌ ಉಭಯ ಮಾದರಿಗಳಲ್ಲೂ ಏಕರೀತಿಯಲ್ಲಿ ಇದೆ.

ರಿಯಲ್‌ಮಿ 12 ಪ್ರೊ

710 GPUನೊಂದಿಗೆ 6ನೇ ಜನರೇಶನ್ 4nm ಕ್ಲಾಸ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್‌, 128 GB/256 GB ಸ್ಟೋರೇಜ್, ತ್ರಿವಳಿ ಕ್ಯಾಮೆರಾ, 50 ಎಂಪಿ ಮುಖ್ಯ ಕ್ಯಾಮೆರಾ (1/2 ಇಂಚಿನ ಸೋನಿ IMX882, OIS: Optical Image Stabiliser, f/1.8 ), 8 ಎಂಪಿ ಅಲ್ಟ್ರಾ ವೈಡ್ ಕ್ಯಾಮೆರಾ, 32 ಎಂಪಿ 2X ಟೆಲಿಫೋಟೊ ಲೆನ್ಸ್, ಎಲ್‌.ಇ.ಡಿ ಫ್ಲಾಶ್ ಹಾಗೂ 16 ಎಂ.ಪಿ ಫ್ರಂಟ್‌ ಕ್ಯಾಮೆರಾ.

ಸಬ್‌ಮರೈನ್ ಬ್ಲೂ ಹಾಗೂ ನಾವಿಗೇಟರ್‌ ಬೀಗ್‌ ಬಣ್ಣದಲ್ಲಿ ಲಭ್ಯ. 128GB ಹಾಗೂ 256GBಗೆ ಕ್ರಮವಾಗಿ ₹25,999 ಹಾಗೂ ₹ 26,999.

ರಿಯಲ್‌ಮಿ 12 ‍ಪ್ರೊ +

4nm ಕ್ಲಾಸ್‌ ಕ್ವಾಲ್ಕಂ ಸ್ನಾಪ್‌ಡ್ರ್ಯಾಗನ್ 7ನೇ ಜನರೇಶನ್ 2, 128GB / 256GB (UFS 3.1) ಸ್ಟೋರೇಜ್, 50MP ಮುಖ್ಯ ಕ್ಯಾಮೆರಾ (1/1.56 ಇಂಚು ಸೋನಿ IMX890 ಸೆನ್ಸಾರ್‌, f/1.8, OIS), ಅಲ್ಟ್ರಾವೈಡ್‌ 8MP (f/2.2), 64MP 3X ಪೆರಿಸ್ಕೋಪ್‌ ಟೆಲಿಫೊಟೊ ಲೆನ್ಸ್ ( Omnivision OV64B, 6X in-sensor zoom, up to 120x zoom, f/2.6), ಎಲ್‌.ಇ.ಡಿ ಫ್ಲಾಶ್, ಹಾಗೂ 32MP (f/2.45) ಫ್ರಂಟ್‌ ಕ್ಯಾಮೆರಾ.

ಸಬ್‌ಮರೈನ್ ಬ್ಲೂ, ನಾವಿಗೇಟರ್‌ ಬೀಗ್‌ ಹಾಗೂ ಎಕ್ಸ್‌ಪ್ಲೋರರ್ ರೆಡ್‌ ಬಣ್ಣದಲ್ಲಿ ಲಭ್ಯ.

8GB RAM + 128GB ದರ ₹29,999

8GB RAM + 256GB ದರ ₹ 31,999

12GB RAM + 256GB ದರ ₹33,999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT