ಮಕ್ಕಳಿಂದ ಹಿಡಿದು ಮನೆಯ ಎಲ್ಲರಿಗೂ ಈಗ ಸ್ಮಾರ್ಟ್ಫೋನ್ ಅತ್ಯಗತ್ಯ ವಸ್ತು. ಸ್ಯಾಮ್ಸಂಗ್ ಭಾರತದಲ್ಲಿ ಹೊಸ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದ್ದು, ಗುರುವಾರ ಗ್ಯಾಲಕ್ಸಿ ಎ01ಎಸ್ ಫೋನ್ ಬಿಡುಗಡೆ ಮಾಡಿದೆ.

ಆನ್ಲೈನ್ ತರಗತಿಗಳಿಗೆ ದೊಡ್ಡ ಪರದೆ, ತಕ್ಕ ಮಟ್ಟಿನ ಕ್ಯಾಮೆರಾ, ಎಲ್ಲ ಅಪ್ಲಿಕೇಷನ್ಗಳೂ ಹ್ಯಾಂಗ್ ಆಗದಂತೆ ಕಾರ್ಯನಿರ್ವಹಿಸುವುದು ಇಂದಿನ ಅಗತ್ಯವಾಗಿದೆ. ಅದಕ್ಕೆ ತಕ್ಕಂತೆ ಸ್ಮಾರ್ಟ್ಫೋನ್ ಕಂಪನಿಗಳು ಫೋನ್ಗಳ ಗುಣಲಕ್ಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿವೆ. ಗ್ಯಾಲಕ್ಸಿ ಎಂ01ಎಸ್ ಫೋನ್ನಲ್ಲಿ 6.2 ಇಂಚು ಎಚ್+ಟಿಎಫ್ಟಿ ಡಿಸ್ಪ್ಲೇ (ಇನ್ಫಿನಿಟಿ ವಿ) ಹಾಗೂ ಸೆಲ್ಫಿಗಾಗಿ 8ಎಂಪಿ, ಹಿಂಬದಿಯಲ್ಲಿ ಎರಡು ಕ್ಯಾಮೆರಾ (13ಎಂಪಿ+2ಎಂಪಿ) ಇದೆ.

ಈ ಹೊಸ ಫೋನ್ ಬೆಲೆ ₹9,999 (ಕಂಪನಿಯ ಕೊಡುಗೆಗಳ ಅನ್ವಯ ಬೆಲೆ ಬದಲಾವಣೆಗೆ ಒಳಪಟ್ಟಿರುತ್ತದೆ).

ಮೀಡಿಯಾಟೆಕ್ ಹೀಲಿಯೊ ಪಿ22 ಆಕ್ಟಾ–ಕೋರ್ ಪ್ರೊಸೆಸರ್ನೊಂದಿಗೆ 3ಜಿಬಿ ರ್ಯಾಮ್ ಹಾಗೂ 32ಜಿಬಿ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512ಜಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳುವ ಅವಕಾಶವಿದೆ. ಇದರೊಂದಿಗೆ ಸುಮಾರು 12 ಗಂಟೆ ವರೆಗೂ ವಿಡಿಯೊ ವೀಕ್ಷಣೆಗೆ ಅನುವಾಗಲು 4,000ಎಂಎಎಚ್ ಬ್ಯಾಟರಿ ಅಳವಡಿಸಲಾಗಿದೆ.

168 ಗ್ರಾಂ ತೂಕವಿರುವ ಹೊಸ ಫೋನ್ ಗ್ರೇ ಮತ್ತು ಲೈಟ್ ಬ್ಲೂ ಎರಡು ಬಣ್ಣಗಳಲ್ಲಿ ಸಿಗಲಿದೆ. ಹಿಂಬದಿಯಲ್ಲಿ ಪಿಂಗರ್ ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್ಲಾಕ್, ಉತ್ತಮ ಆಡಿಯೊಗಾಗಿ ಡಾಲ್ಬಿ ಆಟಮ್ಸ್ ಹಾಗೂ ಕಾರ್ಯಾಚರಣೆಗೆ ಆ್ಯಂಡ್ರಾಯ್ಡ್ 9.0 ಬಳಸಿಕೊಳ್ಳುತ್ತದೆ. ಫೋನ್ನಲ್ಲಿ ಸ್ಯಾಮ್ಸಂಗ್ ಹೆಲ್ತ್ ಆ್ಯಪ್ನ್ನೂ ಇನ್ಸ್ಟಾಲ್ ಮಾಡಲಾಗಿದೆ. ಸ್ಯಾಮ್ಸಂಗ್ ಮಳಿಗೆ, ಸ್ಯಾಮ್ಸಂಗ್ ಇ–ಸ್ಟೋರ್ ಹಾಗೂ ಇತರೆ ಇ–ಕಾಮರ್ಸ್ ಸ್ಟೋರ್ಗಳಲ್ಲಿಯೂ ಈ ಫೋನ್ ಸಿಗಲಿದೆ.

ಗ್ಯಾಲಕ್ಸಿ ಎಂ01ಎಸ್ ಗುಣಲಕ್ಷಣಗಳು:

ಡಿಸ್ಪ್ಲೇ: 6.2 ಇಂಚು ಇನ್ಫಿನಿಟಿ ವಿ
ಸಾಮರ್ಥ್ಯ: 3ಜಿಬಿ ರ್ಯಾಮ್, 32ಜಿಬಿ ಸಂಗ್ರಹ ಸಾಮರ್ಥ್ಯ (512ಜಿಬಿ ವರೆಗೂ ವಿಸ್ತರಿಸಬಹುದು)
ಕ್ಯಾಮೆರಾ: ಹಿಂಬದಿಯಲ್ಲಿ 13ಎಂಪಿ+2ಎಂಪಿ ಲೆನ್ಸ್, ಸೆಲ್ಫಿಗಾಗಿ 8ಎಂಪಿ
ಪ್ರೊಸೆಸರ್: ಎಂಟಿ 6762 ಆಕ್ಟಾ ಕೋರ್ 2.0ಗಿಗಾ ಹರ್ಟ್ಸ್
ಬ್ಯಾಟರಿ: 4000ಎಂಎಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.